ಕ್ರೀಡೆಪ್ರಮುಖ ಸುದ್ದಿ

ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಪ್ರಥಮ ಬಹುಮಾನ ಕೊಡಗು ಪ್ರೆಸ್ ಕ್ಲಬ್ ತಂಡಕ್ಕೆ

ರಾಜ್ಯ(ಮಡಿಕೇರಿ)ಜು.29:-  ಸಿದ್ದಾಪುರ ಸುಂಟಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಗುಡ್ಡೆಹೊಸೂರು ಐಚೆಟ್ಟಿರ ನರೇನ್ ಸೋಮಯ್ಯ ಸ್ಪೋಟ್ಸ್ ಸೆಂಟರ್ ಮೈದಾನದಲ್ಲಿ  ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಪ್ರಥಮ ಬಹುಮಾನವನ್ನು ಕೊಡಗು ಪ್ರೆಸ್ ಕ್ಲಬ್ ತಂಡ ಪಡೆದು ಕೊಂಡಿದೆ.

ಟೆನ್ನಿಸ್ ಬಾಲ್ ಲೀಗ್ ಪಂದ್ಯದಲ್ಲಿ ಹಳೆಯ ವಿದ್ಯಾರ್ಥಿಗಳ ಎ ಮತ್ತು ಬಿ ತಂಡದ ಜತೆ ಕೊಡಗು ಪ್ರೆಸ್ ಕ್ಲಬ್ ಮತ್ತು ಕಂದಾಯ ಇಲಾಖೆ ತಂಡಗಳೂ ಭಾಗವಹಿಸಿದ್ದವು. ಕೊಡಗು ಪ್ರೆಸ್ ಕ್ಲಬ್ ತಂಡವು ಲೀಗ್ ಹಂತದಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಫೈನಲ್ ಹಂತ ಪ್ರವೇಶಿಸಿತು. ಕಂದಾಯ ಇಲಾಖೆ ಹಾಗೂ ಕೊಡಗು ಪ್ರೆಸ್ ಕ್ಲಬ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಕಂದಾಯ ಇಲಾಖೆ ತಂಡವು ನಿಗಧಿತ 6ಓವರುಗಳಿಗೆ  5ವಿಕೆಟ್ ಕಳೆದು ಕೊಂಡು 38 ರನ್ ಗಳಿಸಿತ್ತು. ಪ್ರೆಸ್ ಕ್ಲಬ್ ತಂಡದ ಪರವಾಗಿ ಮುಸ್ತಫಾ2 ವಿಕೆಟ್, ಮಂಜು1, ಇಸ್ಮಾಯಿಲ್2 ವಿಕೆಟ್ ಪಡೆದು ಕೊಂಡರು. 37 ರನ್ ಗುರಿಯೊಂದಿಗೆ ಆಡಿದ ಕೊಡಗು ಪ್ರೆಸ್ ಕ್ಲಬ್ ತಂಡವು 4.3ಎಸೆತಗಳಲ್ಲಿ 3ವಿಕೆಟ್ ಒಪ್ಪಿಸಿ ವಿಜಯದ ಗುರಿ ಸಾಧಿಸಿತು. ಪ್ರೆಸ್ ಕ್ಲಬ್ ತಂಡದ ಪರವಾಗಿ ಹೇಮಂತ್ 16ರನ್, ಸುವರ್ಣ ಮಂಜು 10 (ಅಜೇಯ), ಶಿವರಾಜು4 ಮತ್ತು ಉದಯ(ಅಜೇಯ) 6ರನ್ ಗಳಿಸುವ ಮೂಲಕ ಗುರಿ ಸಾಧಿಸಿತು.

ಲೀಗ್ ಪಂದ್ಯಗಳು

ಕೊಡಗು ಪ್ರೆಸ್ ಕ್ಲಬ್ ಮತ್ತು ಕಂದಾಯ ಇಲಾಖೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಂದಾಯ ಇಲಾಖೆ ತಂಡವು 6ಓವರ್‍ಗಳಲ್ಲಿ 6ವಿಕೆಟ್ ಕಳೆದು 28ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಪ್ರೆಸ್ ಕ್ಲಬ್ ತಂಡವು 4.2ಓವರ್‍ಗಳಲ್ಲಿ 5ವಿಕೆಟ್ ಒಪ್ಪಿಸಿ ಗುರಿ ತಲುಪಿತು. ಹಳೆಯ ವಿದ್ಯಾರ್ಥಿಗಳ ಸಂಘ ಎ ಮತ್ತು ಬಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎ ತಂಡವು ಮೊದಲು ಬ್ಯಾಟ್ ಮಾಡಿ 6ಓವರುಗಳಿಗೆ 2 ವಿಕೆಟ್ ಒಪ್ಪಿಸಿ 75ರನ್ ಗಳಿಸಿತು. ಎ ತಂಡದ ಅಫ್ತಾಬ್ ಅವರು 6 ಸಿಕ್ಸರ್ ಭಾರಿಸಿ ತಮ್ಮ ವೈಯಕ್ತಿಕ ಮೊತ್ತಕ್ಕೆ 50 ರನ್ ಸೇರಿಸಿತು. ಗುರಿ ಬೆನ್ನತ್ತಿದ ಬಿ ತಂಡ 6ಓವರ್ ಆಡಿ ಕೇವಲ 41 ರನ್ ಗಳಿಸಿ ಸೋಲೊಪ್ಪಿತು. ಕಂದಾಯ ಇಲಾಖೆ ಮತ್ತು ಹಳೆಯ ವಿದ್ಯಾರ್ಥಿಗಳ ಎ ತಂಡಗಳ ನಡುವೆ ನಡೆದ 6ಓವರ್ ಪಂದ್ಯದಲ್ಲಿ ಎ ತಂಡ್ವು ಅಫ್ತಾಬ್ ಅವರ 29 ಹಾಗೂ ಉಮ್ಮರ್ ಅವರ 24ರನ್ ಜೊತೆಯಾಟದ ನೆರವಿನೊಂದಿಗೆ  67 ರನ್ ಗಳಿಸಿತ್ತು. 68 ರನ್ ಗುರಿ ಬೆನ್ನತ್ತಿದ ಕಂಧಾಯ ಇಲಾಖೆ ತಂಡವು ಪ್ರವೀಣ್ ಅವರ ಅಮೋಘ 52 ರನ್‍ಗಳ ನೆರವಿನೊಂದಿಗೆ 5.3ಓವರ್‍ನಲ್ಲಿ ಗುರಿ ತಲುಪಿತ್ತು. ಹಳೆಯ ವಿದ್ಯಾರ್ಥಿ ಸಂಘ ಬಿ ಹಾಗೂ ಪ್ರೆಸ್‍ಕ್ಲಬ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಸ್ತಫಾ ಅವರ ಅಮೋಘ 43 ರನ್ ಸಹಾಯದೊಂದಿಗೆ 87 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಹಳೆಯ ವಿದ್ಯಾರ್ಥಿಗಳ ಸಂಘ ಬಿ ತಂಡವು 6 ವಿಕೆಟ್ ಕಳೆದು ಕೊಂಡು 63 ರನ್ಗಳ ಸೋಲು ಕಂಡಿತು. ಪ್ರೆಸ್‍ಕ್ಲಬ್ ಹಾಗೂ ಹಳೆಯ ವಿದ್ಯಾರ್ಥಿ ಸಂಘ ಎ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪ್ರೆಸ್‍ಕ್ಲಬ್ ತಂಡವು ಮುಸ್ತಫಾ ಅವರ 23ರನ್ ಹಾಗೂ ಶಿವರಾಜು ಅವರ 24 ರನ್ ಜೊತೆಯಾಟದ ಮೂಲಕ 59 ರನ್ ಗಳಿಸಿತ್ತು. ನಂತರ ಬ್ಯಾಟ್ ಮಾಡಿದ ಹಳೆಯ ವಿದ್ಯಾರ್ಥಿಗಳ ಎ ತಂಡವು ಕೇವಲ 33 ರನ್ ಗಳಿಸುವಷ್ಟೇ ಸಫಲಾದರು. ಪ್ರೆಸ್‍ಕ್ಲಬ್ ತಂಡವು 26ರನ್‍ಗಳ ಜಯ ಸಾಧಿಸಿತು. ಕಂದಾಯ ಇಲಾಖೆ ಹಾಗೂ ಹಳೆಯ ವಿದ್ಯಾರ್ಥಿಗಳ ನಡುವೆ ನಡೆದ ಪಂದ್ಯದಲ್ಲ ಕಂದಾಯ ಇಲಾಖೆ ಗೆಲುವು ಸಾಧಿಸಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: