ಪ್ರಮುಖ ಸುದ್ದಿ

ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ ನಿಧನ : ಗಣ್ಯರ ಸಂತಾಪ

ದೇಶ(ನವದೆಹಲಿ)ಜು.29:- ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ  ನಿನ್ನೆ ಮುಂಜಾನೆ ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರಿಗೆ 77 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಭಾನುವಾರ ಬೆಳಿಗ್ಗೆ 1.28 ಕ್ಕೆ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 1984 ರಿಂದ ಸಂಸದರಾಗಿದ್ದ ಜೈಪಾಲ್ ರೆಡ್ಡಿ , ತಮ್ಮ ರಾಜಕೀಯ ಜೀವನದಲ್ಲಿ  ಐದು ಬಾರಿ ಲೋಕಸಭಾ ಸಂಸದರಾಗಿ ಎರಡು ಬಾರಿ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ರೆಡ್ಡಿಯವರ ನಿಧನ ತೀವ್ರ ಶೋಕ ವ್ಯಕ್ತಪಡಿಸಿರುವ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಚಿಂತನೆಯ ರಾಜಕಾರಣಿ ಎಂದು ಸ್ಮರಿಸಿದ್ದಾರೆ. ಮಾಜಿ ಕೇಂದ್ರ ಸಚಿವರಾದ ಎಸ್. ಜೈಪಾಲ್ ರೆಡ್ಡಿ  ಅವರು ಚಿಂತನೆಯ ರಾಜಕಾರಣಿ ಮತ್ತು ಅತ್ಯುತ್ತಮ ಸಂಸದರಾಗಿದ್ದರು. ಅವರ ಕುಟುಂಬ ಮತ್ತು ಅನೇಕ ಸಹಚರರಿಗೆ ನನ್ನ ಸಂತಾಪ” ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಮಾಜಿ ಕೇಂದ್ರ ಸಚಿವರು ಉತ್ತಮ ಭಾಷಣಕಾರ ಮತ್ತು ಪರಿಣಾಮಕಾರಿ ಆಡಳಿತಗಾರ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿಯವರ ಸಾವು ದುಃಖ ತರಿಸಿದೆ. ಅವರೊಬ್ಬ ಮಹಾನ್ ಸಂಸದೀಯ ಪಟು ಹಾಗೂ ತೆಲಂಗಾಣದ ದೊಡ್ಡ ಪುತ್ರ ,ತಮ್ಮ ಇಡೀ ಜೀವಮಾನವನ್ನು ಸಾರ್ವಜನಿಕ ಸೇವೆಗಾಗಿ ಮೀಸಲಿಟ್ಟಿದ್ದರು. ಅವರ ಕುಟುಂಬ ಹಾಗೂ ಅವರ ಬೆಂಬಲಿಗರಿಗೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ. (ಎಸ್.ಎಚ್)

Leave a Reply

comments

Related Articles

error: