
ಮೈಸೂರು
ನ್ಯಾಯವಾದಿ ಸಂಜೀವ ಪುನಾಳೆಕರ ಮೇಲೆ ದಾಖಲಾಗಿರುವ ಕೇಸನ್ನು ಸಿ.ಬಿ.ಐ. ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ
ಮೈಸೂರು,ಜು.29:- ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನ್ಯಾಯವಾದಿ ಸಂಜೀವ ಪುನಾಳೆಕರ ಮೇಲೆ ದಾಖಲಾಗಿರುವ ಕೇಸನ್ನು ಸಿ.ಬಿ.ಐ. ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿ ನಿನ್ನೆ ಪ್ರತಿಭಟನೆ ನಡೆಯಿತು.
ಮೈಸೂರಿನ ಅಗ್ರಹಾರ ವೃತ್ತದಲ್ಲಿ ಸಮಿತಿಯ ಅಧ್ಯಕ್ಷ ಶಿವರಾಮ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ನ್ಯಾಯವಾದಿ ಸಂಜೀವ ಪುನಾಳೆಕರ ಮೇಲೆ ದಾಖಲಾಗಿರುವ ಕೇಸನ್ನು ಸಿ.ಬಿ.ಐ. ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರಲ್ಲದೇ, ಮಾಹಿತಿ ಹಕ್ಕು ಕಾರ್ಯಕರ್ತ ವಿಕ್ರಮ ಭಾವೆಯನ್ನು ಅನಧಿಕೃತವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿದರು.
ನಾಗ ಸಾಧುಗಳಿಗೆ ಸಂಬಂಧಪಟ್ಟ ವಿಕೃತ ದೃಶ್ಯಗಳನ್ನು ತೋರಿಸಲಾಗಿರುವ ಲಾಲ್ ಕಫ್ತಾನ್ ಚಲನಚಿತ್ರವನ್ನು ನಿಷೇಧಿಸಬೇಕು. ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡುತ್ತಿರುವವರ ಮೇಲೆ ತಕ್ಷಣ ಕ್ರಮಕೈಗೊಳ್ಳಬೇಕು. ಗೋ ಹತ್ಯೆ ನಿಷೇಧದ ಕಾನೂನುಗಳನ್ನು ತೀವ್ರವಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. (ಕೆ.ಎಸ್,ಎಸ್.ಎಚ್)