ಸುದ್ದಿ ಸಂಕ್ಷಿಪ್ತ
ಆ.1 ರಂದು ಗೌರವಾರ್ಪಣಾ ಸಭೆ
ಮೈಸೂರು,ಜು.29-ಹರ್ಜತ್ ಟಿಪ್ಪು ಸುಲ್ತಾನ್ ಶಹೀದ್ ವತಿಯಿಂದ ಟಿಪ್ಪು ಸುಲ್ತಾನ್ ಅವರ 227ನೇ ಗಂಧ ಉರುಸ್ ಷರೀಫ್ ಆಚರಣೆಯ ಅಂಗವಾಗಿ ಆ.1 ರಂದು ಬೆಳಿಗ್ಗೆ 11.45ಕ್ಕೆ ಅಶೋಕ ರಸ್ತೆಯಲ್ಲಿರುವ ಐತಿಹಾಸಿಕ ಮೀಲಾದ್ ಬಾಗ್ ನಲ್ಲಿ ಗೌರವಾರ್ಪಣಾ ಸಭೆ ಹಮ್ಮಿಕೊಳ್ಳಲಾಗಿದೆ. ನಂತರ ಟಿಪ್ಪು ಗೋರಿಯಿಂದ ಶ್ರೀರಂಗಪಟ್ಟಣದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. (ಎಂ.ಎನ್)