ಮೈಸೂರು

ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆ: ಬಹುಮಾನ ವಿತರಣೆ

ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಸೆ.25 ರ ಸಂಜೆ 6 ಗಂಟೆಗೆ ಸರಸ್ವತಿಪುರಂನ ರೋಟರಿ ಕ್ಲಬ್ ನಲ್ಲಿ 22 ನೇ ವರ್ಷದ ರಾಜ್ಯಮಟ್ಟದ ಕನ್ನಡ ಭಾವಗೀತೆ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮೈಸೂರು ರೋಟರಿ ಕ್ಲಬ್ ಪಶ್ಚಿಮ ಸಂಸ್ಥೆಯ ಅಧ್ಯಕ್ಷರಾದ ಪ್ರೊ ಕೆ.ಎಸ್. ಲಕ್ಷ್ಮಣಗೌಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ರೋಟರಿ ಕ್ಲಬ್ ಪಶ್ಚಿಮ ಸಂಸ್ಥೆಯ ಉಪಾಧ್ಯಕ್ಷರಾದ ಆರ್.ಎನ್. ಪದ್ಮನಾಭ ಉಪಸ್ಥಿತರಿರುತ್ತಾರೆ. ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್ ನ ಅಧ್ಯಕ್ಷರಾದ ಸಿ.ಆರ್. ಹನುಮಂತ್ ಬಹುಮಾನ ವಿತರಿಸಲಿದ್ದಾರೆ. ಸುಗಮ ಸಂಗೀತ ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ. ಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ನ ಸಂಸ್ಥಾಪಕರಾದ ಎಚ್. ಆರ್.ಲೀಲಾವತಿ ಉಪಸ್ಥಿತರಿರುತ್ತಾರೆ.  

Leave a Reply

comments

Related Articles

error: