ಪ್ರಮುಖ ಸುದ್ದಿ

ವಿವಿಧ ಹಾಡಿಗಳಲ್ಲಿ ಆಧಾರ್ ನೋಂದಣಿ ಕಾರ್ಯಕ್ರಮ

ರಾಜ್ಯ(ಮಡಿಕೇರಿ) ಜು.30 :- ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ವಿವಿಧ ಹಾಡಿಗಳಲ್ಲಿ ವಾಸಿಸುತ್ತಿರುವ ಮೂಲನಿವಾಸಿ ಜನಾಂಗಗಳಾದ ಜೇನುಕುರುಬ, ಎರವ, ಸೋಲಿಗ, ಕಾಡುಕುರುಬ, ಕುಡಿಯ ಜನಾಂಗದವರಿಗೆ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ಹಮ್ಮಿಕೊಳ್ಳಲಾಗಿದೆ.
ಪರಿಶಿಷ್ಟ ವರ್ಗದ ಹಾಡಿಯ ನಿವಾಸಿಗಳಿಗೆ ಆಧಾರ್ ಕಾರ್ಡ್ ಸೌಲಭ್ಯ ಒದಗಿಸಲು ಆಧಾರ್ ನೋಂದಣಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಲಾಗುತ್ತಿದ್ದು, ಸೇವಾ ಕೇಂದ್ರಗಳ ವೇಳಾಪಟ್ಟಿ ಇಂತಿದೆ.
ಜುಲೈ, 30 ರಂದು ಕಟ್ಟೆಪುರ ಹಾಡಿಯವರಿಗೆ ಕಟ್ಟೆಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಧಾರ್ ಸೇವಾ ಕೇಂದ್ರ ಸ್ಥಾಪಿಸಲಾಗಿದೆ. ಜುಲೈ 31 ಮತ್ತು ಆಗಸ್ಟ್ 1 ರಂದು ದೊಡ್ಡ ಅಬ್ಬೂರು, ಯಲಕನೂರು ಹೊಸಹಳ್ಳಿ, ಹಳೆಮದಲಾಪುರ, ಆಡಿನಾಡೂರು, ಹಿತ್ಲುಮಕ್ಕಿ ಮತ್ತು ನೇಗಳ್ಳಿ-ಕರ್ಕಳ್ಳಿ ಹಾಡಿಯವರಿಗೆ ನೇರುಗಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಆಗಸ್ಟ್, 2 ರಂದು ವಳಗುಂದ ಹಾಡಿಯವರಿಗೆ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಆಗಸ್ಟ್ 3 ರಂದು ಕಿಬ್ಬೆಟ್ಟ ಹಾಡಿಯವರಿಗೆ ಕಿಬ್ಬೆಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಆಗಸ್ಟ್, 5 ರಿಂದ 7 ರವರೆಗೆ ಯಡವನಾಡು, ಸೂಳೆಬಾವಿ, ಸಜ್ಜಹಳ್ಳಿ, ಕಮ್ತಳ್ಳಿ, ಗಂಧದಹಾಡಿ, ರಂಗನ ಹಾಡಿಯವರಿಗೆ ಯಡವನಾಡು ಗಿರಿಜನ ಆಶ್ರಮ ಶಾಲೆಯಲ್ಲಿ ಆಧಾರ್ ನೋಂದಣಿ ನಡೆಯಲಿದೆ.
ಆಗಸ್ಟ್ 8 ಮತ್ತು 9 ರಂದು ಹುದಗೂರು, ಹುಣಸೆಪಾರೆ, ಬ್ಯಾಡಗೊಟ್ಟ, ಸೀತಾಕಾಲೋನಿ, ಜೇನುಕಲ್ಲು ಬೆಟ್ಟ ಹಾಡಿಯವರಿಗೆ ಮೊದಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಗಸ್ಟ್, 13 ರಂದು ಬೆಂಡೆಬೆಟ್ಟ ಹಾಡಿಯವರಿಗೆ ಕೂಡುಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಗಸ್ಟ್ 14 ಮತ್ತು 16 ರಂದು ಕಲ್ಲೂರು, ಹೇರೂರು, ನಾಕೂರು ಶಿರಂಗಾಲ ಹಾಡಿಯವರಿಗೆ ನಾಕೂರು ಶಿರಂಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,
ಆಗಸ್ಟ್ 17 ಮತ್ತು ಆಗಸ್ಟ್, 19 ರಿಂದ 24 ರವರೆಗೆ ದೊಡ್ಡಬೆಟಗೇರಿ, ಗುಡ್ಡೆಹೊಸೂರು, ಸುಣ್ಣದ ಕೆರೆ, ಬಸವನಹಳ್ಳಿ, ಆನೆಕಾಡು, ಕೆರೆ ಮೂಲೆ, ದಿಡ್ಡಳ್ಳಿ ಹಾಡಿಯವರಿಗೆ ಬಸವನಹಳ್ಳಿ ಗಿರಿಜನ ಆಶ್ರಮ ಶಾಲೆಯಲ್ಲಿ ಆಧಾರ್ ನೋಂದಣಿ ನಡೆಯಲಿದೆ.
ಆಗಸ್ಟ್ 26 ಮತ್ತು 27 ರಂದು ನಂಜರಾಯಪಟ್ಟಣ, ಮೀನುಕೊಲ್ಲಿ, ಹೊಸಪಟ್ನ, ಮಾವಿನಹಳ್ಳ, ಕಬ್ಬಿನಗದ್ದೆ, ಕಂಬಿಬಾಣೆ ಹಾಡಿಯವರಿಗೆ ನಂಜರಾಯಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಗಸ್ಟ್ 28 ರಂದು ಕೂಡ್ಲೂರು ಚೆಟ್ಟಳ್ಳಿ ಹಾಡಿಯವರಿಗೆ ಕೂಡ್ಲೂರು ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಗಸ್ಟ್, 29 ರಂದು ತ್ಯಾಗತ್ತೂರು, ವಾಲ್ನೂರು ಮತ್ತು ಬಾಳೆಗುಂಡಿ ಹಾಡಿಯವರಿಗೆ ವಾಲ್ನೂರು ತ್ಯಾಗತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಗಸ್ಟ್, 30ರಂದು ನೆಲ್ಲಿಹುದಿಕೇರಿ ಹಾಡಿಯವರಿಗೆ ನೆಲ್ಲಿಹುದಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆ, ಆಗಸ್ಟ್ 31 ರಂದು ಚಿನ್ನೇನಹಳ್ಳಿಯವರಿಗೆ ಹೆಬ್ಬಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೆಪ್ಟೆಂಬರ್ 3 ರಂದು ಕಿರಗಂದೂರು ಹಾಡಿಯವರಿಗೆ ಕಿರಗಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೆಪ್ಟೆಂಬರ್ 4 ರಂದು ಗರಗಂದೂರು ಹಾಡಿಯವರಿಗೆ ಗರಂಗದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೆಪ್ಟೆಂಬರ್ 5 ರಂದು ಬೇಳೂರು-ಬಸವನಹಳ್ಳಿ ಹಾಡಿಯವರಿಗೆ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಧಾರ್ ನೋಂದಣಿ ಕಾರ್ಯ ನಡೆಯಲಿದೆ ಎಂದು ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: