ಕರ್ನಾಟಕದೇಶಪ್ರಮುಖ ಸುದ್ದಿ

ಯಡಿಯೂರಪ್ಪ, ಅನಂತ ಕುಮಾರ್ ವಿರುದ್ಧ ಲೋಕಾಯುಕ್ತರಿಗೆ ದೂರು

ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ‍್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಡುವೆ ನಡೆದಿದೆ ಎನ್ನಲಾದ ದೇಣಿಗೆ ವಿಷಯದ ಸಂಭಾಷಣೆಯನ್ನು ಗಂಭೀರವಾಗಿ ಪರಿಗಣಿಸಿದ ಕೆಪಿಸಿಸಿ ಕಾನೂನು ಘಟಕವು ಲೋಕಾಯುಕ್ತರಿಗೆ ಹಾಗೂ ರಾಜ್ಯ ಸರ್ಕಾರ ಸ್ಥಾಪಿಸಿರುವ ಭ್ರಷ್ಟಾಚಾರ ನಿಗ್ರಹ ದಳ-ಎಸಿಬಿಯಲ್ಲಿ ದೂರು ನೀಡಿದೆ.

“ಬಿಜೆಪಿ ಮುಖಂಡರ ಸಂಭಾಷಣೆಯಲ್ಲಿ ಹೈಕಮಾಂಡ್‍ಗೆ ದೇಣಿಗೆ ನೀಡಿರುವುದಾಗಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ, ಕಾನೂನು ಪ್ರಕಾರ ಇದು ಅಪರಾಧಿ ಕೃತ್ಯವಾಗಿದೆ” ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಧನಂಜಯ್ ಅವರು ದೂರಿದ್ದಾರೆ. “ಸಂಭಾಷಣೆಯಿಂದ ಈ ಮುಖಂಡರ ಮುಖವಾಡ ಕಳಚಿದಂತಾಗಿದೆ. ಆದ್ದರಿಂದ ತತ್‍ಕ್ಷಣವೇ ಬಿಎಸ್‍ವೈ ಹಾಗೂ ಅನಂತಕುಮಾರ್ ಅವರ ರಾಜೀನಾಮೆ ಪಡೆಯಬೇಕು. ಇಲ್ಲವಾದಲ್ಲಿ ನ್ಯಾಯಾಂಗದ ಮೊರೆ ಹೋಗಲಾಗುವುದು” ಎಂದು ಎಚ್ಚರಿಸಿದ್ದಾರೆ.

Leave a Reply

comments

Related Articles

error: