ಪ್ರಮುಖ ಸುದ್ದಿಮೈಸೂರು

ಆ.1ರಿಂದ ವಿಶ‍್ವ ಸ್ತನ್ಯಪಾನ ಸಪ್ತಾಹ : ನಗರ ವಿವಿಧೆಡೆ ಜಾಗೃತಿ ಕಾರ್ಯಕ್ರಮ

ಮೈಸೂರು,ಜು.30 : ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಶಿಶುಗಳಿಗೆ ಸ್ತನ್ಯಪಾನ ಮಾಡಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲೆಂದು ಆ. 1ರಿಂದ 7ರವರೆಗೆ ನಗರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಶಾಖೆ ಅಧ್ಯಕ್ಷರಾದ ಡಾ. ರಾಜೇಶ್ವರಿ ಮಾದಪ್ಪ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಶುಗಳು ಜನಸಿದ ಕೂಡಲೇ ಸ್ತನ್ಯಪಾನ ಆರಂಭಿಸಿ ಸುಮಾರ ಎರಡು ವರ್ಷದವರೆಗೆ ಅಥವಾ ಆ ನಂತರವೂ ಕೆಲಕಾಲ ಸ್ತನ್ಯಪಾನ ಮಾಡಿಸುವುದರಿಂದ ಕಿವಿ ಸೋರುವುದು, ಅತಿಸಾರ ಮೊದಲಾದವು ಮಕ್ಕಳಿಗೆ ಬರುವ ಸಾಧ್ಯತೆಯಿಲ್ಲ.

ಅಲ್ಲದೆ, ಸ್ತನ್ಯಪಾನ ಜಾಗೃತಿ ಮೂಡಿಸುವ ಕಾರ್ಯಗಳ ಆರಂಭವಾದ ಮೇಲೆ ಶಿಶು ಮರಣ ಪ್ರಮಾಣ ಸಹಾ ಗಣನೀಯವಾಗಿ ಕಡಿಮೆ ಆಗಿದೆ. ಹೀಗಾಗಿ ಈ ಏಳೂ ದಿನ ಹೆಚ್ಚಾಗಿ ಹೆರಿಗೆ ಆಗುವ ವಿವಿಧ ಆಸ್ಪತ್ರೆ, ಹೆಣ್ಣು ಮಕ್ಕಳೇ ಓದುವ ತೆರೇಸಿಯನ್ ಕಾಲೇಜಿನಲ್ಲಿ ಸ್ತನ್ಯಪಾನ ಸಪ್ತಾಹ ವೇಳೆ ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಲಾಗುವುದೆಂದರು.

ಈ ನಂತರ ಕಾರ್ಯದರ್ಶಿ ಡಾ.ಎಚ್.ಸಿ ಕೃಷ್ಣಕುಮಾರ್ ಮಾತನಾಡಿ, ಆ. ಒಂದರಂದು ಬೆಳಗ್ಗೆ ೧೦ಕ್ಕೆ ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಸಪ್ತಾಹ ಉದ್ಘಾಟನೆಯಾಗಲಿದ್ದು, ಜಿಪಂ ಸಿಇಒ ಕೆ. ಜ್ಯೋತಿ ಇನ್ನಿತರರು ಅತಿಥಿಗಳಾಗಿರುವರೆಂದರು.

ಇನ್ನು, ಸಮಾರೋಪ ಸಮಾರಂಭ ಆ. ಏಳರಂದು ಮಧ್ಯಾಹ್ನ ಮೂರಕ್ಕೆ ಜೆ.ಕೆ. ಮೈದಾನದ ಪ್ಲಾಟಿನಂ ಜ್ಯೂಬಿಲಿ ಸಭಾಂಗಣದಲ್ಲಿ ನಡೆಯಲಿದ್ದು, ಕೆ. ಪದ್ಮಾ, ಡಾ.ಸಿ.ಪಿ. ನಟರಾಜ್, ಡಾ. ಸುಧಾ ರುದ್ರಪ್ಪ ಅತಿಥಿಗಳಾಗಿರಲಿದ್ದು, ಡಾ. ರಾಜೇಂದ್ರಕುಮಾರ್ ಮಾತನಾಡುವರೆಂದರು.

ಅಲ್ಲದೆ, ಸ್ತನ್ಯಪಾನ ಮಾಡಿಸುವುದರಿಂದ ತಾಯರಿಂದಿರಿಗೆ ಸ್ತನ್ಯ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಇದೆ ಎಂದು ವಿವರಿಸಿದರು.

ಡಾ.ಆರ್. ರಾಘವೇಂದ್ರ, ಡಾ. ಕನ್ಯಾ, ಹಾಜರಿದ್ದರು. (ವರದಿ : ಕೆ.ಎಂ.ಆರ್)

 

 

Leave a Reply

comments

Related Articles

error: