ಪ್ರಮುಖ ಸುದ್ದಿ

ಮಾಜಿ ಮುಖ್ಯಮಂತ್ರಿ ಎಸ್​ ಎಂ ಕೃಷ್ಣ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಶವವಾಗಿ ಪತ್ತೆ

ರಾಜ್ಯ(ಮಂಗಳೂರು)ಜು.31:- ಜುಲೈ 29 ರ ರಾತ್ರಿಯಿಂದ ನಾಪತ್ತೆಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್​ ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಶವವಾಗಿ ಪತ್ತೆಯಾಗಿದ್ದಾರೆ.

ನೇತ್ರಾವತಿ ಹಿನ್ನೀರು ಪ್ರದೇಶದಲ್ಲಿ ಇಂದು ಬೆಳಿಗ್ಗೆ ಅವರ ಮೃತದೇಹ ಸಿಕ್ಕಿದೆ. ಮಂಗಳೂರಿನ ಹೊಗೈ ಬಜಾರ್​ನಲ್ಲಿ ಸಿದ್ಧಾರ್ಥ್​ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ. ಶವವನ್ನು ಗುರುತಿಸಿದ ಮೀನುಗಾರರು ದಡಕ್ಕೆ ತಂದಿದ್ದಾರೆ.   ಮಂಗಳೂರಿನ ವೆನ್ಲಾಕ್​ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ. ಸಿದ್ಧಾರ್ಥ್​ ಅವರು ಬದುಕಿಬರಬಹುದೆಂದು ಕಾಯುತ್ತಿದ್ದ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚೇತನ ಹಳ್ಳಿಯಲ್ಲಿರುವ ಅವರ ಕುಟುಂಬ ವರ್ಗವು ಶೋಕ ಸಾಗರದಲ್ಲಿ ಮುಳುಗಿದೆ. ಕೆಫೆ ಕಾಫಿ ಡೇ ಸಂಸ್ಥೆಯ ನಷ್ಟದಿಂದಾಗಿ ನೊಂದಿದ್ದ ಸಿದ್ಧಾರ್ಥ್​ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಆದಾಯ ತೆರಿಗೆ ಇಲಾಖೆಯ ಈ ಹಿಂದಿನ ಡಿಜಿ ತಮಗೆ ಕಿರುಕುಳ ನೀಡಿದ್ದರು ಎಂದು ಸಿದ್ಧಾರ್ಥ್​ ಅವರು ಬರೆದಿದ್ದರೆನ್ನಲಾದ ಪತ್ರವೊಂದು ವೈರಲ್​ ಆಗಿತ್ತು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: