ಪ್ರಮುಖ ಸುದ್ದಿಮೈಸೂರು

ಮಹಿಳೆಯರು ಪುರುಷರ ಸಮಾನವಾಗಿ ರಾಜಕೀಯಕ್ಕೆ ಬಂದಾಗ ಅಭಿವೃದ್ಧಿ ಸಾಧ್ಯ : ಬ್ರಿಜೇಶ್ ಕಾಳಪ್ಪ

ಮಹಿಳೆಯರು ರಾಜಕೀಯಕ್ಕೆ ಪುರುಷರ ಸಮಾನವಾಗಿ ಬಂದಾಗ ಮಾತ್ರವೇ ಆ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು  ಎಐಸಿಸಿ ವಕ್ತಾರ  ಬ್ರಿಜೇಶ್ ಕಾಳಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಮೈಸೂರಿನ ಬನ್ನೂರು ಮುಖ್ಯರಸ್ತೆಯಲ್ಲಿರುವ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಅಯೋಜಿಸಿದ್ದ “ಪ್ರಸ್ತುತ ರಾಜಕೀಯದಲ್ಲಿ ಮಹಿಳೆಯರ ಪಾತ್ರ” ಕುರಿತ ವಿಚಾರ ಸಂಕಿರಣವನ್ನು  ಬ್ರಿಜೇಶ್ ಕಾಳಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ  ಅವರು ಮಹಿಳೆಯರನ್ನು ಮತ್ತಷ್ಟು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ವಿಧಾನ ಸಭೆ ಹಾಗೂ ಸಂಸತ್‍ನಲ್ಲಿಯೂ ಮಹಿಳಾ ಮೀಸಲಾತಿ ನೀಡುವಂತೆ ಕಾಂಗ್ರೆಸ್ ಬಿಜೆಪಿಯನ್ನು ಒತ್ತಾಯಿಸುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಮೀಣ ಭಾಗದ ತಾಲೂಕು ಪಂಚಾಯತ್ ಗಳಲ್ಲಿ ಶೇ.50ರಷ್ಟು ಸ್ಥಾನಗಳನ್ನು ಮೀಸಲಿಡುವ ಮೂಲಕ ಮಹಿಳೆಯರನ್ನು ರಾಜಕೀಯಕ್ಕೆ ತರುವ ಮನಸ್ಸು ಮಾಡಿದೆ. ಸಿಕ್ಕಿರುವ ಅವಕಾಶಗಳನ್ನು ವಿದ್ಯಾವಂತ ಮಹಿಳೆಯರು ಸರಿಯಾಗಿ ಬಳಸಿಕೊಂಡು ರಾಜಕೀಯ ಪ್ರವೇಶಿಸಿದರೆ ಅಭಿವೃದ್ಧಿಗೆ ತಮ್ಮದೇ ಕೊಡುಗೆಗಳನ್ನು ನೀಡಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ನಾಗರತ್ನ,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಬಿ.ಜೆ. ವಿಜಯಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು.

Leave a Reply

comments

Related Articles

error: