ಮೈಸೂರು

ಮನೆಯ ಅಂಗಡಿ ಮಳಿಗೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮೈಸೂರು,ಜು.31:-  29/07/2019 ರಂದು ಮೈಸೂರು ನಗರದ ಆರ್ಥಿಕ & ಮಾದಕ ದ್ರವ್ಯ ಅಪರಾದ ಠಾಣೆ, ಸಿ.ಸಿ.ಬಿ. ಘಟಕದ ಪೊಲೀಸರು ಮಾಹಿತಿ ಮೇರೆಗೆ ಅಶೋಕಪುರಂ ಠಾಣಾ ಸರಹದ್ದಿನ ಡಾ. ಬಿ.ಆರ್. ಅಂಬೇಡ್ಕರ್ ಮುಖ್ಯ ರಸ್ತೆ, 3ನೇ ಕ್ರಾಸ್‍ನಲ್ಲಿರುವ ರವಿ ಎಂಬವರ ಮನೆಯ ಅಂಗಡಿ ಮಳಿಗೆಯಲ್ಲಿ ಯಾವುದೇ ರಹದಾರಿ ಇಲ್ಲದೇ ಅಕ್ರಮವಾಗಿ ಮದ್ಯವನ್ನು ತಂದು ಇಟ್ಟುಕೊಂಡು ಸಾರ್ವಜನಿಕರಿಗೆ ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ನಿತೀನ್ ಬಿನ್ ಲೇ. ರಘು, (24), ಕೂಲಿ ಕೆಲಸ, # 1607, 6ನೇ ಕ್ರಾಸ್, ಆಶೋಕಪುರಂ, ಮೈಸೂರು ಅಶೋಕಪುರಂನ ನಿವಾಸಿ ಪ್ರಕಾಶ್ ಎಂಬಾತನನ್ನು ವಶಕ್ಕೆ ಪಡೆದು ಆರೋಪಿತನ ಬಳಿ ಇದ್ದ (1)180 ಓಲ್ಡ್ ತವರಿನ್ ವಿಸ್ಕಿ ಮದ್ಯದ 11 ಟ್ರೆಟಾ ಪ್ಯಾಕ್‍ಗಳು, (2)90 ಎಂ.ಎಲ್.ನ ವಿಂಡ್ಸರ್ ಡಿಲಕ್ಸ್ ವಿಸ್ಕಿ ಮದ್ಯದ 12 ಟೆಟ್ರಾ ಪ್ಯಾಕ್‍ಗಳು, (3)90 ಎಂ.ಎಲ್.ನ ಹೈವರ್ಡ್ಸ್ ಚಿಯರ್ಸ್ ವಿಸ್ಕಿ ಮದ್ಯದ 29 ಟೆಟ್ರಾ ಪ್ಯಾಕ್‍ಗಳು, (4)90 ಎಂ.ಎಲ್.ನ ಓರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಮದ್ಯದ 21 ಟೆಟ್ರಾ ಪ್ಯಾಕ್‍ಗಳು ಮತ್ತು ಜನರಿಗೆ ಮದ್ಯ ಮಾರಾಟ ಮಾಡಿದ್ದರಿಂದ ಬಂದ ನಗದು ಹಣ   2010 ರೂ.ಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ಆರ್ಥಿಕ ಮತ್ತು ಮಾದಕ ದ್ರವ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. (ಕಾ ಮತ್ತು ಸು)   ಮುತ್ತುರಾಜು ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ. ಯ ಎ.ಸಿ.ಪಿ.  .ಬಿ.ಆರ್. ಲಿಂಗಪ್ಪ ಅವರ ನೇತೃತ್ವದಲ್ಲಿ ಇನ್ಸಪೆಕ್ಟರ್‍ಗಳಾದ  ಹೆಚ್.ಆರ್.ವಿವೇಕಾನಂದ ಹಾಗೂ ಸಿಬ್ಬಂದಿಗಳಾದ ಡಿ.ವಿ. ಮುರಳೀಗೌಡ, ಪುನೀತ್.ಹೆಚ್.ಎಸ್, ನಾಗೇಶ್.ಎನ್.ಎಂ, ಪ್ರಮೋದ್.ಟಿ.ವಿ. ಚಾಲಕರಾದ ರಾಜೇಶ್ ಮಾಡಿರುತ್ತಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: