ಪ್ರಮುಖ ಸುದ್ದಿ

ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಸಾವು ಹಿನ್ನೆಲೆ : ಎಲ್ಲಾ ಕಾಫಿ ಡೇಗಳಿಗೆ ರಜೆ ಘೋಷಣೆ ಮಾಡಿ ಆದೇಶ

ರಾಜ್ಯ(ಬೆಂಗಳೂರು)ಜು.31:- ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ  ಎಲ್ಲಾ ಕಾಫಿ ಡೇಗಳಿಗೆ ರಜೆ ಘೋಷಣೆ ಮಾಡಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

ಕೆಫೆ ಕಾಫಿ ಡೇ ಆಡಳಿತ ಮಂಡಳಿ ವತಿಯಿಂದ ಇಂದು ರಾಜ್ಯಾದ್ಯಂತ ಕಾಫಿ ಉದ್ಯಮ ಸ್ಥಗಿತಗೊಳಿಸಲು ಕರೆ ನೀಡಲಾಗಿದೆ. ಕಾಫಿ ತೋಟ, ಕಾಫಿ ಕ್ಯೂರಿಂಗ್ ಸೇರಿ ಕಾಫಿ ಸಂಬಂಧಿತ ಎಲ್ಲಾ ಉದ್ಯಮಗಳಿಗೂ ರಜೆ ಘೋಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಫೆ ಕಾಫಿ ಡೇ ಮುಖ್ಯ ಕಚೇರಿ ಸೇರಿದಂತೆ ಎಲ್ಲಾ ಕಾಫಿ ಡೇ ಶಾಪ್ ಗಳಿಗೆ ರಜೆ ಘೋಷಿಸಲಾಗಿದೆ. ಆಡಳಿತ ಮಂಡಳಿಯಿಂದ ಎಲ್ಲಾ ಕೆಫೆ ಕಾಫಿ ಡೇ ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮೊನ್ನೆ ನಿಗೂಢವಾಗಿ ನಾಪತ್ತೆಯಾಗಿದ್ದ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಳಿಯ ಉದ್ಯಮಿ ಸಿದ್ದಾರ್ಥ್ ಅವರ ಮೃತದೇಹ ನೇತ್ರಾವತಿ ಹಿನ್ನೀರಿನಲ್ಲಿ  ಪತ್ತೆಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: