ಪ್ರಮುಖ ಸುದ್ದಿಮೈಸೂರು

ತಂದೆಗೆ ತಿಳಿದಿಲ್ಲ ಸಿದ್ಧಾರ್ಥ ಸಾವಿನ ಸುದ್ದಿ

ಮೈಸೂರು,ಜು.31-ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ಅಂತ್ಯಸಂಸ್ಕಾರ ಕೆಲವೇ ಗಂಟೆಗಳಲ್ಲಿ ಚೇತನಹಳ್ಳಿ ಎಸ್ಟೇಟ್ ನಲ್ಲಿ ನಡೆಯಲಿದೆ. ಆದರೆ ಸಿದ್ಧಾರ್ಥ ಸಾವಿನ ವಿಷಯ ವೃದ್ಧ ತಂದೆಗೆ ತಿಳಿದಿಲ್ಲ.

ಸಿದ್ಧಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ ಅವರನ್ನು ನಗರದ ಗೋಪಾಲಗೌಡ ಶಾಂತವೇರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಗಯ್ಯ ಅವರು ಕೋಮಾ ಸ್ಥಿತಿಯಲ್ಲಿರುವುದರಿಂದ ತಮ್ಮ ಒಬ್ಬನೇ ಮಗನ ಸಾವಿನ ಬಗ್ಗೆ ಅವರಿಗೆ ಅರಿವಿಲ್ಲ.

ಪತಿಯ ಜತೆಗಿದ್ದ ತಾಯಿ ವಾಸಂತಿ ಹೆಗ್ಡೆ ಮಗ ನಾಪತ್ತೆಯಾದ ಸುದ್ದಿ ಕೇಳಿ ಚಿಕ್ಕಮಗಳೂರಿನ ಮೂಡಗೆರೆಯ ಚೇತನಹಳ್ಳಿ ನಿವಾಸಕ್ಕೆ ತೆರಳಿದ್ದಾರೆ. ಮನೆಯ ಪಕ್ಕದಲ್ಲೇ ಮಗನ ಅಂತಿಮ ಸಂಸ್ಕಾರ ನಡೆಸಲು ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ತಂದೆಯನ್ನು ನೋಡಲು ಆಗಾಗ ಆಸ್ಪತ್ರೆಗೆ ಬರುತ್ತಿದ್ದ ಸಿದ್ದಾರ್ಥ, ಕಳೆದ ವಾರ ಕೂಡ ತಂದೆಯನ್ನು ನೋಡಿಕೊಂಡು ಹೋಗಿದ್ದರು. (ಎಂ.ಎನ್)

Leave a Reply

comments

Related Articles

error: