ಪ್ರಮುಖ ಸುದ್ದಿ

ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರ : ಮುಸ್ಲಿಂ ಸಹೋದರಿಯರಿಗೆ ನ್ಯಾಯ ಲಭಿಸಿದೆ ಪ್ರಧಾನಿ ಟ್ವೀಟ್

ರಾಜ್ಯ(ನವದೆಹಲಿ)ಜು.31:-  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರವಾಗಿರುವುದನ್ನು ಸ್ವಾಗತಿಸಿದ್ದು  ಮುಸ್ಲಿಂ ಸಹೋದರಿಯರಿಗೆ ನ್ಯಾಯ ಲಭಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದು,  ಮಧ್ಯಮ ಯುಗದ ಕ್ರೂರ ಪದ್ದತಿ  ಇಂದು ಅಂತ್ಯಗೊಂಡಿದ್ದು, ಮುಸ್ಲಿಂ ಸಹೋದರಿಯರಿಗೆ ನ್ಯಾಯ ಲಭಿಸಿದೆ ಎಂದು  ಸಂತಸ ವ್ಯಕ್ತಪಡಿಸಿದ್ದಾರೆ.

ಇಡೀ ದೇಶಕ್ಕೆ ಇಂದು  ಐತಿಹಾಸಿಕ ದಿನ. ಇಂದು ಲಕ್ಷಾಂತರ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರು ಗೆದ್ದಿದ್ದಾರೆ ಮತ್ತು ಅವರಿಗೆ ಘನತೆಯಿಂದ ಬದುಕುವ ಹಕ್ಕು ದೊರೆತಿದೆ. ಅತ್ಯಂತ ಪ್ರಾಚೀನ ಹಾಗೂ ಮಧ್ಯಯುಗದ ಸಂಸ್ಕೃತಿಯನ್ನು ಇದೀಗ ಸಂಸತ್‌ ಅಮಾನ್ಯಮಾಡಿದೆ.

ತ್ರಿವಳಿ ತಲಾಖ್ ನಿಷೇಧ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಲಿದೆ.  ಮಹಿಳೆಯರ ಮೇಲಿನ ಗೌರವ ಇನ್ನಷ್ಟು ಹೆಚ್ಚಾಗಲಿದೆ. ಮುಸ್ಲಿಂ ಮಹಿಳೆಯರ ವಿರುದ್ಧವಾಗಿದ್ದ ತಪ್ಪು ಸಂಸ್ಕೃತಿ ಇದೀಗ ನಾಶವಾಗಿದೆ.  ಇಂತಹ ಆಚರಣೆಗಳಿಂದ ಸಮಸ್ಯೆಗೆ ಎದುರಾಗಿ, ಜೀವನದಲ್ಲಿ ಹೋರಾಟದ ಹಾದಿ ತುಳಿದ ಮಹಿಳೆಯರಿಗೆ ನನ್ನ ಗೌರವ ಸಮರ್ಪಿಸುತ್ತೇನೆ ಎಂದಿದ್ದಾರೆ.

ಈ ವೇಳೆ ಮಸೂದೆಯನ್ನು ಅಂಗೀಕರಿಸುವ ನಿಟ್ಟಿನಲ್ಲಿ ಸಹಕಾರ ನೀಡಿದ ಎಲ್ಲ ಸಂಸದರಿಗೆ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ ಎಂದು  ಟ್ವೀಟರ್ ನಲ್ಲಿ ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: