ಮೈಸೂರು

ಕನಕದಾಸರ ಭಾವಚಿತ್ರಕ್ಕೆ ಸಗಣಿ : ಪ್ರತಿಭಟನೆ

ಕನಕದಾಸರ ಭಾವಚಿತ್ರಕ್ಕೆ  ಕಿಡಿಗೇಡಿಗಳು ಸಗಣಿ  ಬಳಿದಿರುವ  ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಚಿಕ್ಕಬೀಚನಹಳ್ಳಿಯಲ್ಲಿ ನಡೆದಿದೆ.

ಕಿಡಿಗೇಡಿಗಳ ಕೃತ್ಯಕ್ಕೆ ಗ್ರಾಮದ ಜನರು ಆಕ್ರೊಶ ವ್ಯಕ್ತಪಡಿಸಿದ್ದು, ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಗ್ರಾಮದ ವೃತ್ತದಲ್ಲಿರುವ ಕನಕದಾಸರ ಭಾವಚಿತ್ರಕ್ಕೆ ಸಗಣಿ ಬಳಿದಿರುವವರನ್ನು  ಶೀಘ್ರವಾಗಿ ಬಂಧಿಸಬೇಕೆಂದು ಗ್ರಾಮದ ಮುಖಂಡರು ಹಾಗೂ ಯುವಕರು ಒತ್ತಾಯಿಸಿದ್ದಾರೆ.

Leave a Reply

comments

Related Articles

error: