ಮೈಸೂರು

ಬೀದಿ ನಾಯಿಗಳನ್ನು ಮನೆಯಲ್ಲಿರಿಸಿ ಸ್ಥಳೀಯರಿಗೆ ತೊಂದರೆ ನೀಡುತ್ತಿರುವ ಮಹಿಳೆ

ನೆರೆಹೊರೆಯವರು ಒಳ್ಳೆಯವರಿರಬೇಕು ಎಂದು ಆಸೆ ಪಡುವವರೇ ಬಹಳ. ಆದರೆ ಇಲ್ಲೋರ್ವ ಮಹಿಳೆ ಬೀದಿಯ ಜನತೆಗೆಲ್ಲ ತಲೆನೋವಾಗಿ ಪರಿಣಮಿಸಿದ್ದಾಳೆ. ಬೀದಿ ನಾಯಿ ಅಂದರೆನೇ ಭಯಪಡೋ ಕಾಲ. ಯಾವಾಗ  ಮೈಮೇಲೆ ಎರಗುತ್ತೋ ಹೇಳಕಾಗಲ್ಲ. ಅಂತಹುದರಲ್ಲಿ ಮಹಿಳೆಯೋರ್ವರು ಸುಮಾರಿ ಎಂಟ್ಹತ್ತು ಬೀದಿನಾಯಿಗಳನ್ನು ಮನೆಯೊಳಗಿಟ್ಟುಕೊಂಡು ಅಕ್ಕಪಕ್ಕದವರ ನಿದ್ದೆಗೆಡಿಸಿ, ತಲೆನೋವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉಮಾಟಾಕೀಸ್ ರಸ್ತೆಯಲ್ಲಿರುವ ಮನೆ.ನಂ.892ರಲ್ಲಿ ವಾಸವಿರುವ ವರಲಕ್ಷ್ಮಿ ಎಂಬ ಮಹಿಳೆಯೆ ಬೀದಿ ನಾಯಿಗಳನ್ನು ಸಾಕಿದವರಾಗಿದ್ದಾರೆ. ಇವರು ಮನೆಯಲ್ಲಿಯೇ ನಾಯಿಗಳನ್ನು ಇಟ್ಟುಕೊಂಡಿದ್ದು ಅದರ ಮಲ ಮೂತ್ರಗಳು ಮನೆಯಲ್ಲಿಯೇ ಆಗುತ್ತಿರುತ್ತದೆ. ಮನೆಯ ಮುಂದುಗಡೆ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಮಾಡುವುದರಿಂದ ಹೊಲಸು ನೀರು ಬೀದಿಗೆ ಬಂದು ನಿಂತಿರುತ್ತಿದ್ದು, ದಿನದಿನಕ್ಕೆ ಸೊಳ್ಳೆಗಳ ಕಾಟ ಜಾಸ್ತಿಯಾಗುತ್ತಿದೆ. ಯಾರು ಬಂದು ಹೇಳಿದರೂ ಆಕೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳುಹಿಸುತ್ತಾಳೆ. ರಾತ್ರಿಯೆಲ್ಲ ನಾಯಿಗಳು ಕಿರುಚುವುದು, ಬೊಗಳುವುದು ಮಾಡುತ್ತಿದ್ದು ನಿದ್ರೆಯೇ ಇಲ್ಲದಂತಾಗಿದೆ 2016ರಿಂದಲೂ ಇದೇ ರೀತಿ ನಡೆಯುತ್ತಿದೆ ನಮಗೂ ಸಹಿಸಿ, ಸಹಿಸಿ ಸಾಕಾಯಿತು. ಇದಕ್ಕೆ ಕೊನೆ ಎಂದು ಎಂಬುದು ಅಕ್ಕಪಕ್ಕದವರ ಅಳಲು.

ಲಷ್ಕರ್ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ನಾಯಿಗಳನ್ನು ಹೊರಗೊಯ್ಯಲು ಯತ್ನಿಸಿದಾಗ ನನ್ನ ಕಾಯಲು ಇಟ್ಟುಕೊಂಡಿದ್ದೇನೆ ಎಂದು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊರಗಟ್ಟಿದ್ದಾಳೆ ಎನ್ನಲಾಗಿದೆ. ಇದೀಗ ಮಹಾನಗರಪಾಲಿಕೆಯವರೂ ಭೇಟಿ ನೀಡಿದ್ದು ಅವರಿಗೂ ಬೈದು ಕಳುಹಿಸಿದ್ದಾಳೆ. ಅಕ್ಕಪಕ್ಕದವರಿಗೆ ರೋಗದ ಭೀತಿ ಎದುರಾಗಿದ್ದು, ಲಷ್ಕರ್ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ದಾಖಲಾಗಿದೆ. ಮಹಾನಗರಪಾಲಿಕೆಯವರು ಆಗಮಿಸಿ ಇದೀಗ ಏಳು ನಾಯಿಗಳನ್ನು ಕೊಂಡೊಯ್ದಿದ್ದಾರೆ.

Leave a Reply

comments

Related Articles

error: