ಪ್ರಮುಖ ಸುದ್ದಿಮೈಸೂರು

ಮೈಸೂರು ರಂಗಕರ್ಮಿಗಳ ಬಗ್ಗೆ ನಾಟಕ ಅಕಾಡೆಮಿಯಿಂದ ಮಲತಾಯಿ ಧೋರಣೆ : ಖಂಡನೆ

ಮೈಸೂರು,ಜು.31 :ಕರ್ನಾಟಕ ನಾಟಕ ಅಕಾಡೆಮಿಯು ರಂಗಭೂಮಿಯಲ್ಲಿ ಸಾಧನೆ ಮಾಡಿದ ಸಾಧಕರಿಗಾಗಿ 2019-20ರ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಮೈಸೂರಿನ ರಂಗಸಾಧಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಸಕ್ತ ಸಾಲಿನ ಪ್ರಶಸ್ತಿಯಲ್ಲಿ ಮೈಸೂರಿನ ಯಾವೊಬ್ಬ ರಂಗಸಾಧಕರಿಗೂ ಈ ಗೌರವ ನೀಡಿಲ್ಲ, ಸಾಂಸ್ಕೃತಿ ನಗರಿ ಮೈಸೂರು ರಂಗಸಾಧನೆಯಲ್ಲಿ ಯಾವ ರೀತಿಯಲ್ಲಿಯೂ ಹಿಂದೆ ಬಿದ್ದಿಲ್ಲ, ಹಲವಾರು ಹಿರಿಯ ರಂಗಸಾಧಕರು ಪ್ರಶಸ್ತಿಗೆ ಯೋಗ್ಯರಾಗಿದ್ದರು ಅವರನ್ನು ನಿರ್ಲಕ್ಷಿಸಿರುವುದು ರಾಜ್ಯ ನಾಟಕ ಅಕಾಡೆಮಿಯ ದೋಷವಾಗಿದ್ದು ಮೈಸೂರಿನ ರಂಗಕರ್ಮಿಗಳಿಗೆ ತೋರಿರುವ ಅಗೌರವ  ಎಂದು ವಿಷಾಧಿಸಿದೆ.

ಜಿಲ್ಲೆಯ ರಂಗಕರ್ಮಿಗಳ ಮೇಲೆ ಅಕಾಡೆಮಿಯು ಮಲತಾಯಿ ಧೋರಣೆ ಪ್ರದರ್ಶಿಸಿರುವುದನ್ನು ತೀವ್ರವಾಗಿ ಖಂಡಿಸಲಾಗುವುದು ಎಂದು ಕಾರ್ಯದರ್ಶಿ ಬಿ.ರಾಜೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: