ಸುದ್ದಿ ಸಂಕ್ಷಿಪ್ತ

ಆರ್ಥಿಕ ಸೌಲಭ್ಯ : ಅರ್ಜಿ ಆಹ್ವಾನ

ರಾಜ್ಯ(ಮಂಡ್ಯ)ಆ.1:- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2019-20ನೇ ಸಾಲಿನಲ್ಲಿ “ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ” ಲಿಂಗತ್ವ ಅಲ್ಪಸಂಖ್ಯಾತರಿಗೆ ಆದಾಯ ಉತ್ಪನ್ನಕರ ಚಟುವಟಿಕೆಗಳನ್ನು ಕೈಗೊಳ್ಳಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನೇರವಾಗಿ 50,000ರೂ. ಗಳ (ರೂ.25,000/-ಗಳ ಸಾಲ ಹಾಗೂ  ರೂ. 25,000/-ಗಳ ಸಹಾಯಧನ)  ಆರ್ಥಿಕ ಸೌಲಭ್ಯ ನೀಡಲಾಗುವುದು ಈ ಸೌಲಭ್ಯ ಪಡೆಯಲು ಅರ್ಹ ಮತ್ತು ಆಸಕ್ತಿಯುಳ್ಳ ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಾಲ ಸೌಲಭ್ಯ ಪಡೆಯಲು ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪರ ಕಾರ್ಯನಿರ್ವಹಿಸುತ್ತಿರುವ ಹಾಗೂ ಜಿಲ್ಲಾಧಿಕಾರಿಗಳಿಂದ ಅಂಗೀಕರಿಸಲ್ಪಟ್ಟ ಸಮುದಾಯ ಆಧಾರಿತ ಸಂಸ್ಥೆಗಳಿಂದ ನೋಂದಾಯಿತ ಸದಸ್ಯತ್ವವನ್ನು ಅಫಿಡೆವಿಟ್ ಮೂಲಕ ಪ್ರಮಾಣೀಕರಿಸಿ ದಾಖಲೆಯನ್ನು ಸಲ್ಲಿಸುವುದು. ಸಾಲ ಸೌಲಭ್ಯಕ್ಕಾಗಿ ನೀಡುವ ಅರ್ಜಿಯಲ್ಲಿ ಅಧೀಕೃತ ನಿವಾಸದ ವಿಳಾಸ, ಮತದಾರರ ಗುರುತಿನ ಚೀಟಿ, ಆಧಾರ್‍ಕಾರ್ಡ್, ಪಡಿತರ ಚೀಟಿ ಯಾವುದಾದರೊಂದು ದಾಖಲಾತಿಯ ಪ್ರತಿಯನ್ನು ಸಲ್ಲಿಸುವುದು. ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಕಡ್ಡಾಯವಾಗಿ ಖಾತೆಯನ್ನು ಹೊಂದಿರಬೇಕು ಮತ್ತು ಬ್ಯಾಂಕ್ ಖಾತೆಯೊಂದಿಗೆ ಅರ್ಜಿದಾರರ ಆಧಾರ್ ಲಿಂಕೇಜ್ ಆಗಿರುವ ಬ್ಯಾಂಕ್ ಖಾತೆ ಪುಸ್ತಕವನ್ನು ಸಲ್ಲಿಸುವುದು. ಅರ್ಜಿಯೊಂದಿಗೆ ಆದಾಯೋತ್ಪನ್ನ ಚಟುವಟಿಕೆಯನ್ನು ಆಯ್ಕೆ ಮಾಡಿಕೊಂಡು ಯೋಜನಾ ವರದಿ ಸಲ್ಲಿಸಬೇಕು.
ಅರ್ಹ ಮತ್ತು ಆಸಕ್ತಿಯುಳ್ಳ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿಗಳನ್ನು ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಡ್ಯ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು  ಅಗತ್ಯ    ದಾಖಲಾತಿಗಳೊಂದಿಗೆ    ಆಗಸ್ಟ್ 15 ರೊಳಗೆ ರೊಳಗೆ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಡ್ಯ ಇವರಿಗೆ ಸಲ್ಲಿಸಬೇಕು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: