ಮೈಸೂರು

ಒಂದು ವರ್ಷ ಗಳ ಕಾಲ ರಜೆಯ ಮೇಲೆ ತೆರಳಿದ ಪಾಲಿಕೆ ಆಯುಕ್ತೆ ಶಿಲ್ಪ ನಾಗ್ : ಮುಡಾ ಆಯುಕ್ತರಿಗೆ ಹೆಚ್ಚುವರಿ ಜವಾಬ್ದಾರಿ

ಮೈಸೂರು,ಆ.1:- ಮೈಸೂರು ಮಹಾ ನಗರ ಪಾಲಿಕೆಯ ಆಯಕ್ತರಾದ ಶಿಲ್ಪಾ ನಾಗ್ ಅವರು  ಒಂದು ವರ್ಷ ಗಳ ಕಾಲ ರಜೆಯ ಮೇಲೆ ತೆರಳಿದ್ದು, ಹೆಚ್ಚುವಾರಿ ಜವಾಬ್ದಾರಿ ನಿರ್ವಹಣೆ ಮಾಡುವಂತೆ ಮುಡಾ ಅಯುಕ್ತ ಕಾಂತರಾಜ್ ಗೆ ಸರ್ಕಾರ ಅದೇಶ ಹೊರಡಿಸಿದೆ.

ಪಾಲಿಕೆಯ ಆಯುಕ್ತರ ರಜೆಯಿಂದ ಪಾಲಿಕೆಯಲ್ಲಿ ಅಭಿವೃದ್ಧಿ ಕ್ಷೀಣಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸರ್ಕಾರ ಶಿಶು ಪಾಲನಾ ಅರ್ಜಿ ಹಿನ್ನೆಲೆಯಲ್ಲಿ ರಜೆ ನೀಡಿದೆ. ಮೈಸೂರು ಪಾಲಿಕೆ ಹೊಣೆಯನ್ನು ಮುಡಾ ಆಯುಕ್ತರಿಗೆ ವಹಿಸಲಾಗಿದ್ದು, ಇಂದು ಪಾಲಿಕೆ ಹೆಚ್ಚುವರಿ ಅಯುಕ್ತರಾಗಿ ಕಾಂತರಾಜ್ ಅಧಿಕಾರ ಸ್ವೀಕರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: