ದೇಶ

ಉನ್ನಾವೊ ಅತ್ಯಾಚಾರ ಪ್ರಕರಣ: ಸಿಬಿಐ ಅಧಿಕಾರಿಗಳಿಗೆ ಸುಪ್ರೀಂನಿಂದ ಸಮ್ಮನ್ಸ್ ಜಾರಿ

ನವದೆಹಲಿ,ಆ.1-ಉನ್ನಾವೊ ಅತ್ಯಾಚಾರ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಿಬಿಐ ಅಧಿಕಾರಿಗಳಿಗೆ ಸಮ್ಮನ್ಸ್ ನೀಡಿದೆ.

ಪ್ರಕರಣದ ತನಿಖೆಯ ಪ್ರಗತಿ ಕುರಿತು ವಿವರ ಪಡೆಯಲು ಗುರುವಾರ ಮಧ್ಯಾಹ್ನ 12 ಗಂಟೆಗೆ ನ್ಯಾಯಾಲಕ್ಕೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳಿಗೆ ಸಮ್ಮನ್ಸ್ ನೀಡಲಾಗಿದೆ.

ತನಿಖೆಯಲ್ಲಿ ಯಾವ ರೀತಿಯ ಪ್ರಗತಿಯಾಗಿದೆ ಎಂದು ವಿವರಿಸುವಂತೆ ನ್ಯಾಯಾಲಯಕ್ಕೆ ತಿಳಿಸುವಂತೆ ಸಿಬಿಐ ಅಧಿಕಾರಿಗೆ ಸೂಚನೆ ನೀಡಲಾಗಿದೆ. ತನಿಖೆಯ ಸ್ಥಿತಿಗತಿಯ ಕುರಿತು ಕೂಡ ಸಿಬಿಐ ಅಧಿಕಾರಿ ಬಳಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿವರಣೆ ಕೇಳಿದ್ದಾರೆ.

ಸುಪ್ರೀಂ ಕೋರ್ಟ್ ಕೇಸಿನ ವಿಚಾರಣೆಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವ ಸಾಧ್ಯತೆಯಿದೆ. (ಎಂ.ಎನ್)

Leave a Reply

comments

Related Articles

error: