Uncategorized

8ನೇ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತಿ

ಮೈಸೂರು ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆಯು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ನೇತೃತ್ವದಲ್ಲಿ ಸೆ.25 ರ ಬೆ.10 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್  ಕ್ರೀಡಾಂಗಣದಲ್ಲಿ 8ನೇ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತೋತ್ಸವದ ಬೃಹತ್ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ತಾಲೂಕು ಕಚೇರಿ ಪಕ್ಕದ ಮೈದಾನದಿಂದ ಮೆರವಣಿಗೆ ಹೊರಟು ಕ್ರೀಡಾಂಗಣಕ್ಕೆ ಬಂದು ಸೇರಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಸುತ್ತೂರಿನ ಶ್ರೀ ದೇಶಿಕೇಂದ್ರ ಸ್ವಾಮೀಜಿ ಹಾಗೂ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿಗಳು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಹೆಚ್.ಸಿ ಮಹದೇವಪ್ಪ, ಸಂಸದ ಧೃವನಾರಾಯಣ, ಶಾಸಕರಾದ ಜಿ.ಟಿ,ದೇವೆಗೌಡ, ಸಿ.ಪುಟ್ಟರಂಗಶೆಟ್ಟಿ, ಎಸ್.ಜಯಣ್ಣ, ಆರ್.ನರೇಂದ್ರ, ವಿ.ಸೋಮಣ್ಣ ಹಾಗೂ ಉದಯವಾಣಿ ಪತ್ರಿಕೆಯ ಪ‍್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

ವಿಶ್ವಕರ್ಮ ಜಯಂತಿಯಂದು ಪ್ರತಿ ವರ್ಷ ನೀಡುವ ವಿಶ್ವಕರ್ಮ ಪ್ರಶಸ್ತಿಗೆ ಈ ಬಾರಿ ಕನ್ನಡ ಚಲನಚಿತ್ರ ನಟ ಡಾ.ಶಿವರಾಜ್ ಕುಮಾರ್, ಖ್ಯಾತ ಕ್ರೀಡಾಪಟು ದೀಪಾ ಕರ್ಮಾಕರ್, ಖ್ಯಾತ ಹೃದ್ರೋಗ ತಜ್ಞ ಡಾ. ಮಂಜುನಾಥ್, ಖ್ಯಾತ ಹಿರಿಯ ವಕೀಲ ವಿ.ಲಕ್ಷ್ಮಿ ನಾರಾಯಣರವರು ಆಯ್ಕೆಯಾಗಿದ್ದಾರೆ.

Leave a Reply

comments

Related Articles

error: