ಮೈಸೂರು

ಒಕ್ಕಲಿಗರ ಸಂಘಕ್ಕೆ ಸೇರಿದ ಕೋಟ್ಯಾಂತರ ರೂ. ಆಸ್ತಿ ಕಬಳಿಕೆಗೆ ಯತ್ನ: ಡಾ.ಕೆ.ಮಹದೇವ್ ಆರೋಪ

ರಾಜ್ಯ ಒಕ್ಕಲಿಗರ ಸಂಘಕ್ಕೆ ಸೇರಿರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಕಬಳಿಸಲು ಪ್ರಮುಖ ರಾಜಕೀಯ ಪಕ್ಷಿಗಳ ಮುಖಂಡರೇ ಮುಂದಾಗಿದ್ದಾರೆಂದು ಮೈಸೂರಿನಲ್ಲಿ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಹಂಗಾಮಿ ಅಧ್ಯಕ್ಷ ಡಾ. ಕೆ. ಮಹದೇವ್ ಆರೋಪಿಸಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು ಸಚಿವರಾದ  ಡಿ.ಕೆ ಶಿವಕುಮಾರ್, ಎ. ಮಂಜು, ಜೆಡಿಎಸ್ ಶಾಸಕ ಎನ್. ಚಲುವರಾಯಸ್ವಾಮಿ ಸೇರಿದಂತೆ ಮತ್ತಿತರ ರಾಜಕೀಯ ಮುಖಂಡರುಗಳು ಒಕ್ಕಲಿಗರ ಸಂಘದ ಆಸ್ತಿ ಕಬಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ದಾಖಲೆಗಳ ಸಮೇತ ಪತ್ತೆ ಮಾಡಿರುವ ನನ್ನ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.  ಈ ಎಲ್ಲಾ ದೃಶ್ಯಾವಳಿಗಳು ಬೆಂಗಳೂರಿನಲ್ಲಿರುವ ರಾಜ್ಯ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಅಳವಡಿಸಿರುವ ಸಿ.ಸಿ ಕ್ಯಾಮರಾದಲ್ಲಿ ದಾಖಲಾಗಿವೆ. ಈ ಸಂಬಂಧ ಈಗಾಗಲೇ ನಾನು ರಾಜ್ಯಪಾಲರಿಗೆ ದೂರು ನೀಡಿದ್ದೇನೆ. ಆದರೂ ಇದುವರೆಗೆ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಮಾತ್ರವಲ್ಲ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಎ.ಮಂಜು ಅವರು ಈ ಘಟನೆಯ ನೈತಿಕತೆಯನ್ನು ಹೊರಬೇಕು. ಕಾರಣ ಇವರು ಕ್ರಿಮಿನಲ್ ಹಿನ್ನಲೆಯುಳ್ಳವರ ಸಹಕಾರದಿಂದ ಮುಂದೆ ಬಂದವರು. ಇವರ ರಾಜೀನಾಮೆ ಪಡೆದು ಇವರನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಮಾತ್ರವಲ್ಲ ನನಗೆ ಪೊಲೀಸರ ಭದ್ರತೆ ಅವಶ್ಯಕತೆಯಿದೆ. ನಾನೂ ಪ್ರಾಮಾಣಿಕವಾಗಿ ಹಾಗೂ ಬದ್ಧತೆಯಿಂದ ಕೆಲಸ ಮಾಡಲು ಇದು ಅವಶ್ಯಕವಾಗಿದೆ ಎಂದರು.

Leave a Reply

comments

Related Articles

error: