ಸುದ್ದಿ ಸಂಕ್ಷಿಪ್ತ

ಉಪ ಸಮನ್ವಯಾಧಿಕಾರಿ ಬೆಟ್ಟನಾಯಕ್‍ರಿಗೆ ಬೀಳ್ಕೊಡುಗೆ

ಮಡಿಕೇರಿ ಆ.2 :- ಮೂವತ್ತಮೂರು ವರ್ಷ ಹತ್ತು ತಿಂಗಳು ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಉಪ ಯೋಜನಾ ಸಮನ್ವಯಾದಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದ ಬೆಟ್ಟನಾಯಕ್ ಅವರನ್ನು ಇಲಾಖೆಯ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಚ್ಚಾಡೋ ಅವರು ಮಾತನಾಡಿ ಸಾಧು ಸ್ವಭಾವದವರಾಗಿದ್ದು ಯಾರೊಡನೆಯು ದ್ವೇಷ ಕಟ್ಟಿಕೊಂಡವರಲ್ಲ. ತಾವಾಯಿತು, ತಮ್ಮ ಇಲಾಖೆಯ ಕೆಲಸವಾಯಿತು. ಇಂತಹವರು ಸಹ ಶಿಕ್ಷಕರಾಗಿ ಉಪ ಪ್ರಾಂಶುಪಾಲರಾಗಿ ಡಯಟ್‍ನ ಉಪನ್ಯಾಸಕರಾಗಿ ಕ್ಷೇತ್ರ ಶಿಕ್ಷಣಾದಿಕಾರಿಗಳಾಗಿ ವಿವಿಧ ಹಂತಗಳಲ್ಲಿ ತಮ್ಮ ಛಾಪು ಪಡಿಸಿದ ಶ್ರೀಯುತರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿಯಾದ ಪಾಂಡು, ಸಹಾಯಕ ಶಿಕ್ಷಣಾದಿಕಾರಿ ಕಾಶೀನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅದ್ಯಕ್ಷರಾದ ಚೇತನ್, ಸೋಮವಾರಪೇಟೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಂಜುನಾಥ್, ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: