ಮೈಸೂರು

ಅರ್ಬನ್ ಹಾತ್ ನಲ್ಲಿ ಶ್ರಾವಣದ ಸಂಭ್ರಮಕ್ಕೆ ಆನಂದ ತುಂಬುವ ವಸ್ತ್ರ ಉತ್ಸವ

ಮೈಸೂರು,ಆ.2:-  ಆಷಾಢ ಮಾಸ ಮುಗಿದಿದ್ದು,  ಶ್ರಾವಣ ಮಾಸ ಕಾಲಿರಿಸಿದೆ. ಶ್ರಾವಣ ಬಂದರೆ ಆನಂದ ತರುವಂಥ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಹಬ್ಬಗಳ ಆಚರಣೆಯಲ್ಲಿ ಆ ದಿನಗಳು ಕಳೆದು ಹೋಗುವುದು ತಿಳಿಯುವುದೇ ಇಲ್ಲ. ಹಬ್ಬಕ್ಕೂ ಮಹಿಳೆಯರಿಗೂ ಅವಿನಾಭಾವ ಸಂಬಂಧವಿದೆ. ಹಬ್ಬಗಳ ಸಂಭ್ರಮ ಹಸಿರಾಗಿರಬೇಕಾದರೆ ಪೂರಕವಾದ ಆಭರಣ, ವಸ್ತ್ರ, ಪರಿಕರಗಳು ಬೇಕು. ಇವೆಲ್ಲವುಗಳನ್ನು ಒಂದೇ ಕಡೆ ಖರೀದಿಸಲು ಅವಕಾಶ ಲಭಿಸಿದರೆ ಎಷ್ಟು ಚೆನ್ನಾಗಿರುತ್ತದೆ.  ನಿಮ್ಮ ಕನಸು, ಆಕಾಂಕ್ಷೆಗಳನ್ನೆಲ್ಲ ಈಡೇರಿಸಿಕೊಳ್ಳಲು ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಇರುವ ಜೆಎಸ್‍ಎಸ್ ಅರ್ಬನ್ ಹಾತ್‍  ಈ ಸುವರ್ಣಾವಕಾಶವನ್ನು ಜನತೆಗಾಗಿ ಕಲ್ಪಿಸಿಕೊಟ್ಟಿದೆ.

ಜುಲೈ 26ರಿಂದ ಆಗಸ್ಟ್ 4ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಅರ್ಬನ್ ಹಾತ್‍ನಲ್ಲಿ ನಡೆಯುತ್ತಿರುವ ವಸ್ತ್ರ ಉತ್ಸವದಲ್ಲಿ ವಿವಿಧ ರಾಜ್ಯಗಳ ಆಕರ್ಷಕ ರೇಷ್ಮೆ ಸೀರೆಗಳು, ಕೈಮಗ್ಗದ ಉತ್ಪನ್ನಗಳು, ಕರಕುಶಲ ವಸ್ತುಗಳು, ಆಲಂಕಾರಿಕ ಆಭರಣಗಳೂ ಕೈಗೆಟಕುವ ದರದಲ್ಲಿ ಲಭ್ಯವಿದೆ.

ಈ ಬಾರಿಯ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಒಡಿಶಾ ಸರಕಾರದ ಅಂಗಸಂಸ್ಥೆಯಾದ ಬಯಾನಿಕದ ವಿಶಿಷ್ಟ ಸೀರೆಗಳು, ವಸ್ತ್ರಗಳು ಮನ ಸೆಳೆಯುತ್ತಿವೆ. ಹಬ್ಬದ ಸಂಭ್ರವನ್ನು ಇಮ್ಮಡಿಗೊಳಿಸಲು ನೆರವಾಗುವುದರ ಜತೆಗೆ ಈ ಸೀರೆಗಳು ಗ್ರಾಹಕರ ಆಯ್ಕೆಯ ಬಣ್ಣಗಳಲ್ಲೂ ದೊರಕುತ್ತವೆ ಎಂಬುದು ಗಮನ ಸೆಳೆಯುವ ಅಂಶವಾಗಿದೆ.

ಸಂಬಲ್ಪುರಿ ಸಿಲ್ಕ್, ತಸ್ಸರ್ ಸಿಲ್ಕ್, ಕಾಟನ್ ಸೀರೆಗಳ ವಿಶಾಲ ಸಂಗ್ರಹವೇ ಇದೆ. ಎಲ್ಲ ವರ್ಗದ ಗ್ರಾಹಕರೂ ಒಪ್ಪುವ, ಅವರ ಮನ ಸೆಳೆಯುವ ಈ ಸೀರೆಗಳು ಬಲು ದುಬಾರಿಯೇನಲ್ಲ. ಇಂಥ ವಿಶಿಷ್ಟ ಸೀರೆಗಳೂ ಕನಿಷ್ಠ 1 ಸಾವಿರ ರೂಪಾಯಿಯಿಂದ ಆರಂಭಗೊಂಡು 27 ಸಾವಿರ ರೂಪಾಯಿ ವರೆಗಿನ ಬೆಲೆಯ ಸೀರೆಗಳೂ ಇವೆ.

ಪದ್ಮಶ್ರೀ ಸಿಲ್ಕ್ ಅಂಡ್ ಸಾರೀಸ್ ಮಳಿಗೆ ಸೀರೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳಿಗೆ ಮನ ಸೆಳೆಯುತ್ತದೆ. ಇಲ್ಲಿ ಸೀರೆಗಳ ಕುಚ್ಚಿಗೂ ಖಚಿತತೆ ನೀಡಲಾಗುತ್ತದೆ. ಇಲ್ಲಿ ಖರೀದಿಸಿದ ಸೀರೆಗಳಲ್ಲಿ ದೋಷ ಉಂಟಾದರೆ ಅದರ ಸರ್ವಿಸ್ ಅನ್ನೂ ಮಾಡಿಕೊಡಲಾಗುತ್ತದೆ. ಈ ಸೀರೆಗಳಿಗೆ ವಿಮೆಯೂ ಇದ್ದು, ಸೀರೆಗಳ ಜತೆಗೆ ಬ್ಲೌಸ್‍ಗೂ ಕುಚ್ಚು ವಿನ್ಯಾಸ ಮಾಡಿಕೊಡಲಾಗುತ್ತದೆ. ವಿಶಿಷ್ಟ ವಿನ್ಯಾಸದ ಸೀರೆಗಳು ಕಡಿಮೆ ಬೆಲೆಗೆ ದೊರೆಯುತ್ತವೆ.

ಈ ಮಳಿಗೆಯಲ್ಲಿ 1,200 ರೂಪಾಯಿಯಿಂದ 25 ಸಾವಿರ ರೂಪಾಯಿ ಬೆಲೆ ಬಾಳುವ ವಿಭಿನ್ನ ಸೀರೆಗಳೂ ಪ್ರದರ್ಶನ, ಮಾರಾಟಕ್ಕೆ ಇವೆ.

ಕಣ್ಣಾಮುಚ್ಚಾಲೆ ಆಡುವ ಮುಂಗಾರಿನಲ್ಲಿ ಆಗೊಮ್ಮೆ ಈಗೊಮ್ಮೆ ಬಿಸಿಲಿನ ಝಳವೂ ಹೆಚ್ಚಾಗಿರುತ್ತದೆ. ಇಂಥ ಸಂದರ್ಭದಲ್ಲಿ ಮನೆಯಿಂದ ಹೊರಗಡೆ ಹೋಗಾಬೇಕಾದಾಗ ಮುಖ, ತಲೆಗೆ ನೆರಳು ಬೇಕಲ್ಲ. ಇದಕ್ಕೆ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ವಸ್ತುಗಳು ಬೇಕೆಂದು ನಿಮಗೆ ಅನಿಸಿದ್ದರೆ ಅಂಥವುಗಳೂ ವಸ್ತ್ರ ಉತ್ಸವದಲ್ಲಿವೆ.

ಪಶ್ಚಿಮ ಬಂಗಾಳದಲ್ಲಿ ಸಿಗುವ ಹುಲ್ಲಿನಿಂದ ತಯಾರಿಸಿರುವ ಟೋಪಿಗಳು, ಪರ್ಸ್‍ಗಳು, ಪೌಚ್‍ಗಳು, ಬ್ಯಾಗ್‍ಗಳು, ಚಾಪೆಗಳು, ಕರ್ಟನ್‍ಗಳು, ಟೇಬಲ್ ಕವರ್‍ಗಳು ಇವೆ.

ಸೆಣಬಿನ ಚೀಲಗಳು, ವ್ಯಾನಿಟಿ ಬ್ಯಾಗ್‍ಗಳು, ಟ್ರಾವೆಲ್ ಬ್ಯಾಗ್‍ಗಳು ಕೂಡ ಇವೆ.

ಕೈಮಗ್ಗದ ವಸ್ತ್ರಗಳು, ಕಾಟನ್ ಶರ್ಟ್‍ಗಳು, ಸೀರೆಗಳು, ಪ್ಯಾಂಟ್‍ಗಳೂ ಮಳಿಗೆಗಳಲ್ಲಿವೆ. ಖಾದಿ ವಸ್ತ್ರಗಳೇ ಬೇಕು ಎನ್ನುವವರ ಆಯ್ಕೆಗಳನ್ನು ಈಡೇರಿಸುವಂತಹ ಮಳಿಗೆಗಳಿಗೂ ಅರ್ಬನ್ ಹಾತ್ ಸೂರು ಒದಗಿಸಿದೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಬೇಕಾದ ವಸ್ತ್ರಗಳು ಇವೆ. ಅವುಗಳ ಜತೆಗೆ ಪಾರಂಪರಿಕ ಆಭರಣಗಳೂ ಉತ್ಸವದಲ್ಲಿದ್ದು, ಗ್ರಾಹಕರಿಗೆ ಉತ್ಸಾಹವನ್ನು ನೀಡುತ್ತಿವೆ. ಹಬ್ಬದ ದಿನಗಳಲ್ಲಿ ಮನೆಯನ್ನು, ದೇವರಕೋಣೆಯನ್ನು ಅಲಂಕರಿಸಬೇಕು ಎಂದು ಇಚ್ಛಿಸಿದ್ದರೆ ಅಂಥ ಆಕರ್ಷಕ, ಅಲಂಕಾರಿಕ ವಸ್ತುಗಳೂ ಇವೆ. ಸೀರೆ ಅಥವಾ ಇನ್ನಾವುದೇ ಧಿರಿಸುಗಳ ಮೆರುಗು ಹೆಚ್ಚಿಸಲು ನೆರವಾಗುವ ಎಂಬ್ರಾಯ್ಡರಿಗಳೂ ಮಳಿಗೆಗಳಲ್ಲಿವೆ. ಬಾಗಿಲಿಗೆ, ಹೊಸ್ತಿಲಿಗೆ ಅಲಂಕರಿಸುವಂಥ ಬಗೆಬಗೆ ವಸ್ತುಗಳು ಇವೆ. ಮರದ ಪೀಠೋಪಕರಣಗಳು, ವಿವಿಧ ಪರಿಕರಗಳು ಇವೆ.

ವಿವಿಧ ರೀತಿಯ ಉಡುಪುಗಳು, ಸೀರೆಗಳ ಮೇಲೂ ಕಲಾವಿದರು ತಮ್ಮ ಕೈಚಳಕ ಮೂಡಿಸಿದ್ದಾರೆ. ವಸ್ತ್ರಗಳ ಸಹಜ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದಾರೆ.

ಪಶ್ಚಿಮ ಬಂಗಾಳದ ಸೆಣಬಿನ ಉತ್ಪನ್ನಗಳು ಉತ್ಸವದಲ್ಲಿ ಮನ ಸೆಳೆಯುತ್ತಿವೆ. ಆಕರ್ಷಕ, ಪ್ರಾಕೃತಿಕ ಬಣ್ಣಗಳನ್ನು ಉಪಯೋಗಿಸಿ ತಯಾರಿಸಿರುವ ಈ ಉತ್ಪನ್ನಗಳು ಆಕರ್ಷಕವಾಗಿದ್ದು, ಬಳಕೆದಾರ ಸ್ನೇಹಿಯಾಗಿವೆ.

ವಿಶಿಷ್ಟ ಬಗೆಯ ಕಲಾತ್ಮಕ ವಸ್ತ್ರಗಳ ಮಳಿಗೆಯೂ ಈ ಬಾರಿ ಉತ್ಸವದಲ್ಲಿವೆ. ಸ್ಕರ್ಟ್‍ಗಳು, ದುಪಟ್ಟಾ, ಸಲ್ವಾರ್‍ಗಳು, ಸಮ್ಮರ್, ವಿಂಟರ್ ಮಾಸ್ಕ್‍ಗಳು ಇವೆ. ಡ್ರೆಸ್ ಮೆಟೀರಿಲ್‍ಗಳ ಸಂಗ್ರಹವೇ ಇದೆ.

ಜಾರ್ಖಂಡ್‍ನ ತಸ್ಸರ್ ರೇಷ್ಮೆ ಸೀರೆಗಳು, ಮಧುಬನಿ ಸೀರೆಗಳು, ಡ್ರೆಸ್ ಮೆಟೀರಿಯಲ್‍ಗಳು ದುಪಟ್ಟಾ, ಆರ್ಗಾನಿಕ್ ತಸ್ಸರ್ ಸಿಲ್ಕ್ ಸೀರೆಗಳೂ ಮಳಿಗೆಗಳಲ್ಲಿ ಸಿಗುತ್ತಿವೆ.

ಪಶ್ಚಿಮ ಬಂಗಾಳದ ಸಿಲ್ಕ್ ಸೀರೆಗಳು, ಮಧ್ಯಪ್ರದೇಶದ ಕಾಟನ್, ಸಿಲ್ಕ್ ಸೀರೆಗಳು ಚಂದೇರಿ ಸೀರೆಗಳು ಇವೆ. ಬೆಡ್ ಕವರ್‍ಗಳು, ಪೋಚಂಪಲ್ಲಿ ಡ್ರೆಸ್‍ಮೆಟೀರಿಯಲ್‍ಗಳು, ದುಪಟ್ಟಾ, ಲುಂಗಿಗಳು, ಮಕ್ಕಳ ಉಡುಪುಗಳು, ಸ್ವೆಟರ್‍ಗಳು ಇವೆ.

ವರಮಹಾಲಕ್ಷ್ಮಿ ಹಬ್ಬಕ್ಕಾಗಿಯೇ ವಿನ್ಯಾಸಗೊಳಿಸುವಂಥ ಪ್ರಿಂಟೆಡ್ ಸಿಲ್ಕ್ ಸೀರೆಗಳು ಇವೆ. ಆಂಧ್ರಪ್ರದೇಶದ ಪ್ರಸಿದ್ಧ ಕಲಮ್‍ಕಾರಿ ಸೀರೆಗಳು, ಹತ್ತಿಯ ಆಕರ್ಷಕ ಸೀರೆಗಳು ಗ್ರಾಹಕರ ನಿರೀಕ್ಷೆಯಲ್ಲಿವೆ. ಪಶ್ಚಿಮ ಬಂಗಾಳದ ಕಲ್ಕತ್ತದ ವಿಶಿಷ್ಟ ಸೀರೆಗಳು, ಹತ್ತಿಯ ಸೀರೆಗಳು, ಫ್ಯಾಬ್ರಿಕ್‍ಗಳು, ಕುರ್ತಾಗಳು ಇವೆ. ಎಂಬ್ರಾಯ್ಡರಿ ಮಾಡಿರುವ, ಕಸೂತಿ ಮಾಡಿರುವ ವಸ್ತ್ರಗಳು, ಬನಾರಸ್ ಸೀರೆಗಳು ಪ್ರಮುಖ ಆಕರ್ಷಣೆಗಳಾಗಿವೆ.

ಕಾಂಚಿ ಸೀರೆಗಳು, ಸಾಫ್ಟ್ ಸಿಲ್ಕ್ ಸೀರೆಗಳು ಇವೆ. ಸಿಲ್ಕ್ ಮಾರ್ಕ್ ಇರುವ ಸೀರೆಗಳು ಈ ಮಳಿಗೆಯ ವೈಶಿಷ್ಟ್ಯ. ಮಧ್ಯಪ್ರದೇಶದ ಬೊಟಿಕ್ ಪ್ರಿಂಟ್ ಸೀರೆಗಳು, ಕಾಟನ್ ಸೀರೆಗಳು ಲಭ್ಯ ಇವೆ.

ಸುಮಾರು 70 ಮಳಿಗೆಗಲ್ಲಿ ಸುತ್ತಾಡಿ ಕೊಂಚ ವಿರಮಿಸಬೇಕು ಎನ್ನುವವರಿಗೆ ವಿವಿಧ ಬಗೆಯ ಖಾದ್ಯಗಳೂ ಇಲ್ಲಿವೆ. ಬಾಯಾರಿಕೆಯಾದರೆ ಜ್ಯೂಸ್ ಕೂಡ ಸಿಗುತ್ತದೆ.

ತ್ರಿಡಿ ಲೋಕ

ತ್ರಿ ಡಿ ಕಲೆ ಮೂಲಕ ಚಿತ್ರಿಸಿದ ಹುಲಿಯ ಎದುರು, ಮೆಟ್ಟಿಲು, ಸ್ಟೂಲ್‍ಗಲ್ಲಿ ನಿಂತು ಛಾಯಾಚಿತ್ರವನ್ನೂ ತೆಗೆಸಿಕೊಳ್ಳಬಹುದು. ಇವೆಲ್ಲವೂ ಅಚ್ಚಳಿಯದೆ ನಿಮ್ಮ ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತವೆ.

ಖರೀದಿಗೆ ವಿಶಾಲ ಆಯ್ಕೆ ಇರುವ ಈ ಬಾರಿಯ ವಸ್ತ್ರ ಉತ್ಸವ ಗ್ರಾಹಕರಿಗೆ ವಿಶಿಷ್ಟ ಬಗೆಯ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.  ಸಾರ್ವಜನಿಕರು ಅರ್ಬನ್ ಹಾತ್‍ಗೆ ಸಂಚರಿಸಲು ನೆರವಾಗುವಂತೆ ನಗರ ಬಸ್ ನಿಲ್ದಾಣದಿಂದ 117/1 ಸಂಖ್ಯೆಯ ಬಸ್‍ಗಳು ಸಂಚರಿಸುತ್ತವೆ. ಉತ್ಸವದ ಕುರಿತು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9686677232, 9844550845, 8553416939 ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: