ಮೈಸೂರು

ಇಬ್ಬರು ದ್ವಿ ಚಕ್ರ ವಾಹನ ಕಳ್ಳರ ಬಂಧನ : 1,50,000ರೂ. ಬೆಲೆಯ 03 ದ್ವಿಚಕ್ರ ವಾಹನ ವಶ

ಮೈಸೂರು,ಆ.2:- ಮೈಸೂರು ನಗರ ಸಿಸಿಬಿ ಪೊಲೀಸರು   30.07.2019 ರಂದು ಮಾಹಿತಿ ಮೇರೆಗೆ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಕೆಸರೆ ಬಸ್ ನಿಲ್ದಾಣದ ಮುಂಭಾಗ ಕಾರ್ಯಾಚರಣೆ ನಡೆಸಿ, ದ್ವಿಚಕ್ರ ವಾಹನಗಳನ್ನು ಕಳುವು ಮಾಡಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಶೇಖ್ ಸದ್ದಾಮ್ ಬಿನ್ ಶೇಖ್ ನಾಸೀರ್, (19), ತನ್ವಿರ್ ಸೇಠ್ ನಗರ, ಮೈಸೂರು, ಇಸ್ಮಾಯಿಲ್ ಷರೀಫ್ ಬಿನ್ ನೂರುಲ್ಲಾ ಷರೀಫ್, (20), ಬಿಸ್ಮಿಲ್ಲಾ ನಗರ, ರಾಜೀವ್‍ನಗರ ಎಂದು ಗುರುತಿಸಲಾಗಿದ್ದು, ಇವರನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿ, ಇವರು ಮೈಸೂರಿನ ಬನ್ನಿ ಮಂಟಪ, ವಿ.ವಿ ಪುರಂ ಹಾಗೂ ಹಾಸನದಲ್ಲಿ ಕಳುವು ಮಾಡಿದ್ದ   1,50,000ರೂ.ಬೆಲೆಯ (2- ಹೊಂಡಾ ಆಕ್ಟೀವಾ ಸ್ಕೂಟರ್, 1-ಹೀರೋ ಹೊಂಡಾ ಮೋಟಾರು ಸೈಕಲ್) ಗಳನ್ನು ವಶಪಡಿಸಿಕೊಂಡಿರುತ್ತಾರೆ.

ಈ ಬಗ್ಗೆ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿರುತ್ತದೆ. ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ (ಕಾ ಮತ್ತು ಸು)   ಎಂ.ಮುತ್ತುರಾಜು ಹಾಗೂ ಡಿ.ಸಿ.ಪಿ (ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ)   ಬಿ.ಟಿ ಕವಿತಾ ಅವರ ಮಾರ್ಗದರ್ಶನದಲ್ಲಿ ಪಿಐ ಸಿ.ಕಿರಣ್‍ಕುಮಾರ್, ಎ.ಎಸ್.ಐ ಚಂದ್ರೇಗೌಡ, ಸಿಬ್ಬಂದಿಗಳಾದ ಅಸ್ಗರ್ ಖಾನ್, ಲಕ್ಷ್ಮೀಕಾಂತ, ಯಾಕುಬ್ ಷರೀಫ್, ರಾಮಸ್ವಾಮಿ, ಚಿಕ್ಕಣ್ಣ, ಗಣೇಶ್.ಎಂ.ಆರ್. ಶಿವರಾಜು, ರಾಜೇಂದ್ರ, ಚಂದ್ರಶೇಖರ್, ನಿರಂಜನ,   ಚಾಮುಂಡಮ್ಮ  ಚಾಲಕರಾದ ಗೌತಮ್, ಶಿವಕುಮಾರ್   ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: