ಪ್ರಮುಖ ಸುದ್ದಿ

ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅನರ್ಹಗೊಂಡ ಶಾಸಕರಿಗೆ ಟಕ್ಕರ್ ನೀಡಲು ಕಾಂಗ್ರೆಸ್ ತಯಾರಿ : ವೀಕ್ಷಕರ ನೇಮಕ

ರಾಜ್ಯ(ಬೆಂಗಳೂರು)ಆ.2:- ಅನರ್ಹಗೊಂಡಿರುವ ಶಾಸಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಶತಾಯಗತಾಯ ಗೆಲ್ಲಲು ಸಿದ್ಧತೆ ನಡೆಸುತ್ತಿದೆ. ಈ ನಡುವೆ 17 ಕ್ಷೇತ್ರಗಳಿಗೆ ವೀಕ್ಷಕರನ್ನು ಕಾಂಗ್ರೆಸ್ ನೇಮಕ ಮಾಡಿದೆ.

ಆರ್. ಆರ್ ನಗರಕ್ಕೆ ಸಂಸದ ಡಿ.ಕೆ ಸುರೇಶ್, ಕೆ.ಆರ್ ಪುರಂ ಕ್ಷೇತ್ರಕ್ಕೆ ಕೆ.ಜೆ ಜಾರ್ಜ್, ಯಶವಂತಪುರ ಕ್ಷೇತ್ರಕ್ಕೆ ಎಂ.ಕೃಷ್ಣಪ್ಪ ಮತ್ತು ಜಮೀರ್ ಅಹ್ಮದ್ ಖಾನ್,  ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ ಮಾಗಡಿ ಬಾಲಕೃಷ್ಣ,  ಕೆ.ಆರ್ ಪೇಟೆ ಕ್ಷೇತ್ರಕ್ಕೆ ಚಲುವರಾಯಸ್ವಾಮಿ, ಹುಣಸೂರು ಕ್ಷೇತ್ರಕ್ಕೆ ಮಾಜಿ ಸಚಿವ ಮಹದೇವಪ್ಪರನ್ನು ನೇಮಕ ಮಾಡಿದೆ.

ಹಾಗೆಯೇ ರಾಣಿಬೆನ್ನೂರು ಕ್ಷೇಥ್ರಕ್ಕೆ ಹೆಚ್ಎಂ ರೇವಣ್ಣ, ಗೋಕಾಕ್ ಗೆ ಶಿವಾನಂದ ಪಾಟೀಲ್, ಹೊಸಕೋಟೆ ಕೃಷ್ಣೇಭೈರೇಗೌಡ, ಮಸ್ಕಿ ಈಶ್ವರ್ ಖಂಡ್ರೆ, ಹಿರೇಕೆರೂರುಗೆ ಹೆಚ್.ಕೆ ಪಾಟೀಲ್,  ಅಥಣಿ ಕ್ಷೇತ್ರಕ್ಕೆ ಎಂ.ಬಿ ಪಾಟೀಲ್, ಕಾಗವಾಡ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ನೇಮಕ ಮಾಡಿದೆ.

ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅನರ್ಹಗೊಂಡ ಶಾಸಕರಿಗೆ ಟಕ್ಕರ್ ನೀಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: