ಮೈಸೂರು

ಕಲಾ ಸಂತೆಯಲ್ಲಿ ಪ್ರತಿಭೆ ಪ್ರದರ್ಶಿಸಿದ ವಿದ್ಯಾರ್ಥಿನಿಯರು

ಅಲ್ಲಿ ತರಯ ತರಹದ ಬಾಯಲ್ಲಿ ನೀರೂರಿಸುವ ಖಾದ್ಯವಿತ್ತು. ಸದಾ ಓದಿನ ಕಡೆಯೇ ಗಮನ ಹರಿಸಿದರೆ ವ್ಯವಹಾರದ ಜ್ಞಾನವಾಗುವುದಾದರೂ ಹೇಗೆ? ಅದನ್ನೂ ಅರಿತುಕೊಂಡರೇ ಒಳ್ಳೆಯದು ಎಂದರಿತ ಕಾಲೇಜು ಅಧ್ಯಾಪಕ ವೃಂದ ವಿದ್ಯಾರ್ಥಿನಿಯರಿಗಾಗಿ ಕಲಾಸಂತೆಯನ್ನು ಆಯೋಜಿಸಿದ್ದರು.

ಮೈಸೂರಿನ ಮಹಾರಾಣಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿಯರು ತರಹೇವಾರಿ ತಿಂಡಿ-ತಿನಿಸುಗಳನ್ನು ತಂದು ಅವರದೇ ವಿದ್ಯಾರ್ಥಿನಿ ಗ್ರಾಹಕರಿಗೆ ನೀಡಿದರು. ಕೇವಲ ಪಠ್ಯ ಚಟುವಟಿಕೆಗಳಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡು ಗಮನ ಸೆಳೆದರು.

ಬಿಸಿಲ ಬೇಗೆಗೆ ಬಾಯಾರಿಸುವ ತಂಪಾದ ಪಾನೀಯಗಳು, ಚುರುಮುರಿ, ಬಿರಿಯಾನಿ, ರಾಗಿಮುದ್ದೆ, ಸಲಾಡ್ ಹೀಗೆ ವಿವಿಧ ತಿನಿಸುಗಳು,ಪಾನೀಯಗಳು ಗಮನ ಸೆಳೆದವು. ಅಷ್ಟೇ ಅಲ್ಲದೇ ಒಂದೇ ಕೈಯ್ಯಿಂದಲೇ ಮೊಂಬತ್ತಿ ಬೆಳಗುವ, ಮೆಹಂದಿಹಾಕುವ, ಬಲೂನ್ ಒಡೆಯುವ ಪ್ರತಿಭೆಗಳನ್ನು ಪ್ರದರ್ಶಿಸಿ ಅಚ್ಚರಿ ಮೂಡಿಸಿದರು.

ಸಂತೆಯು ಬೆಳಿಗ್ಗೆ 10ಗಂಟೆಯಿಂದ  ಆರಂಭಗೊಂಡಿದ್ದು, 3ರವರೆಗೆ ನಡೆಯಲಿದೆ. ಪ್ರಾಧ್ಯಾಪಕ ವೃಂದ, ಹಲವು ಗಣ್ಯರು ಈ ಸಂದರ್ಭ  ಉಪಸ್ಥಿತರಿದ್ದು, ವಿದ್ಯಾರ್ಥಿನಿಯರಿಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

Leave a Reply

comments

Related Articles

error: