ಮೈಸೂರು

ಸಿ ಟಿ ಎ ಸಿ ಶಿಬಿರದಲ್ಲಿ ಹಲವು ಬಹುಮಾನ ತಮ್ಮದಾಗಿಸಿಕೊಂಡ ಸಂತ ಜೋಸಫರ ಪ್ರಥಮ ದರ್ಜೆ ಕಾಲೇಜಿನ ಎನ್ ಸಿ ಸಿ ಕೆಡೆಟ್ ಗಳು

ಮೈಸೂರು, ಆ.2:-  ಇತ್ತೀಚೆಗೆ ಮೈಸೂರಿನಲ್ಲಿ ನಡೆದ  ಸಿ ಟಿ ಎ ಸಿ ಶಿಬಿರದಲ್ಲಿ ಸಂತ ಜೋಸಫರ ಪ್ರಥಮ ದರ್ಜೆ ಕಾಲೇಜಿನ ಎನ್ ಸಿ ಸಿ ಕೆಡೆಟ್ ಗಳು ಭಾಗವಹಿಸಿ ಬಹುಮಾನವನ್ನು ಮುಡಿಗೇರಿಸಿಕೊಂಡಿದ್ದಾರೆ.

ಶಿಬಿರದಲ್ಲಿ ಉತ್ತಮ ಶಿಬಿರಾರ್ಥಿಯಾಗಿ ಸುಷ್ಮಿತಾ ವಿ ಅವರು ಉತ್ತಮ ಕವಾಯತುಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಕೆಡೆಟ್ ಸುಶ್ಮಿತಾ, ಕೆಡೆಟ್ ಅಕ್ಷಯಾರಮ್ಯ, ಕೆಡೆಟ್ ಹಿಮಾನಿ, ಕೆಡೆಟ್ ಅಮೃತಾ,ಕೆಡೆಟ್ ಶಿಲ್ಪಾ, ಕೆಡೆಟ್ ದೇಚಮ್ಮ, ಕೆಡೆಟ್ ನೇತ್ರಾ, ಕೆಡೆಟ್ ಮಿಥುನ, ಕೆಡೆಟ್ ಸಿಂಚನ, ಕೆಡೆಟ್ ಅಂಜು, ಕೆಡೆಟ್ ಮಹಾಲಕ್ಷ್ಮಿ, ಕೆಡೆಟ್ ಫೈಜಾ,ಕೆಡೆಟ್ ಸುಪ್ರಿತಾ ಅವರು ಈ ತಂಡದಲ್ಲಿ ಭಾಗವಹಿಸಿದ್ದಾರೆ.

ಸುಪ್ರಿತಾ ಮತ್ತು ತಂಡದವರು ನೃತ್ಯ ಪ್ರದರ್ಶನದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಗುಂಪು ಹಾಡುಗಾರಿಕೆಯಲ್ಲೂ ಕೂಡ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಅಧ್ಯಾಪಕ ವೃಂದ ಆಡಳಿತ ಮಂಡಳಿ ಅಭಿನಂದಿಸಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: