ಪ್ರಮುಖ ಸುದ್ದಿಮೈಸೂರು

ಆ.4ರಂದು 35 ಜೊತೆ ಕಾಟಾ ಕುಸ್ತಿ ಪಂದ್ಯಾವಳಿ

ಮೈಸೂರು,ಆ.2 : ಸಮಾಜ ಸೇವಕ, ನ್ಯಾಯವಾದಿ ಎಸ್.ಉಮೇಶ್ ಜನ್ಮ ದಿನದಂಗವಾಗಿ ಕಾಟಾ ಕುಸ್ತಿ ಪಂದ್ಯಾವಳಿಯನ್ನು ನಂಜನಗೂಡಿನ ವಿದ್ಯಾವರ್ಧಕ ಕಾಲೇಜು ಮೈದಾನದಲ್ಲಿ ಆ.4ರಂದು ಏರ್ಪಡಿಸಲಾಗಿದೆ ಎಂದು ಕುಸ್ತಿ ಪಂದ್ಯಾವಳಿ ಆಯೋಜಕ ದೈತ್ಯ ರಾಜು ತಿಳಿಸಿದರು.

ಅಂದು ಮಧ್ಯಾಹ್ನ 2 ರಿಂದ ನಡೆಯುವ ಪಂದ್ಯಾವಳಿಯನ್ನು ಶಾಸಕ ಹರ್ಷವರ್ದನ್ ಉದ್ಘಾಟಿಸುವರು, ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕರಾದ ಎನ್.ಮಹೇಶ್, ರಂಜನಕುಮಾರ್, ಅನಿಲ್ ಚಿಕ್ಕಮಾದು, ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ, ಮಾಜಿ ಮೇಯರ್ ಪುರುಷೋತ್ತಮ್, ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಹಾಗೂ ಇತರರು ಹಾಜರಿರುವರು.

ರಮ್ಮನಹಳ್ಳಿ ವೀರಭದ್ರಸ್ವಾಮಿ ಗರಡಿ ಚಿಕ್ಕಣ್ಣನವರ ಮಗ ಫೈಲ್ವಾನ್ ರವಿ, ಹಾವೇರಿ ಪೈಲ್ವಾನ್ ಮಹೇಶ್ ನಡುವೆ ಮಾರ್ಫಿಟ್ ಕುಸ್ತಿಯಾಗಲಿದೆ. ನಂಜನಗೂಡಿನ ಶ್ರೀರಾಂಪುರ ಹತ್ತುಜನರ ಗರಡಿಯ ಪೈಲ್ವಾನ್ ಪ್ರಸನ್ನ, ಕನಕಾಪುರ ಪೈಲ್ವಾನ್ ಅಲ್ತಾಫ್ ಶೇಖರ್ ನಡುವೆ ಒಂದು ಗಂಟೆಗಳ ಕಾಲ ಕುಸ್ತಿ ನಡೆಯಲಿದೆ, ಮಾರ್ಪಿಟ್ ಕುಸ್ತಿ ವಿಜೇತರಿಗೆ ‘ನಂಜನಗೂಡು ಕೇಸರಿ’ ಹಾಗೂ 1ಗಂಟೆ ಕುಸ್ತಿ ವಿಜೇತರಿಗೆ ‘ನಂಜನಗೂಡು ಕಂಠೀರವ’ ಬಿರುದು, ಗಧ ನೀಡಿ ಸನ್ಮಾನಿಸಲಾಗುವುದು, ಇದುವರೆಗೂ ಸುಮಾರು 35 ಜೊತೆ ಕುಸ್ತಿಪಟುಗಳು ಹೆಸರು ನೊಂದಾಯಿಸಿಕೊಂಡಿರುವರು ಎಂದರು.

ಮಧುಸೂದನ್, ಪ್ರಸನ್ನ, ಶಂಕರ್, ಸುಧಾಕರ್ ಹಾಗೂ ಇತರರು ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: