ಮೈಸೂರು

‘ನಾವು ಯಾರ್ಗೂ ಕಮ್ಮಿ ಇಲ್ಲ’ ರಿಯಾಲಿಟಿ ಶೋ ಆಡಿಷನ್ ಸೆ. 24 ರಿಂದ 26ರ ವರೆಗೆ

‘ನಾವು ಯಾರ್ಗೂ ಕಮ್ಮಿ ಇಲ್ಲ’ ಎನ್ನುವ ಮ್ಯೂಸಿಕ್ ರಿಯಾಲಿಟಿ ಶೋವನ್ನು ವಿಶೇಷ ಚೇತನರಿಗಾಗಿ ಆಯೋಜಿಸಿದ್ದು ಇದರ  ಆಡಿಷನ್ ಅನ್ನು ಸೆ.24 ರಿಂದ 26 ರ ವರೆಗೆ ನಡೆಸಲಾಗುವುದು ಎಂದು ನವಚೇತನ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

ಅವರು ಸೆ.22ರಂದು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಕಲಾಮಂದಿರದಲ್ಲಿ ಸೆ.26ರಂದು ಅಂತಿಮ ಸುತ್ತಿಗೆ ಬೆಳಿಗ್ಗೆ 9 ರಿಂದ ರಾತ್ರಿ 9 ರ ವರೆಗೆ  ಅಡಿಷನ್ ನಡೆಯುವುದು. ಅಂತಿಮ ಸುತ್ತಿಗೆ ಆಯ್ಕೆಯಾದವರಿಗೆ ತಜ್ಞರಿಂದ ತರಬೇತಿ ನೀಡಲಾಗುವುದು. ರಾಜ್ಯದ ತುಮಕೂರು, ಧಾರವಾಡ, ಮೈಸೂರಿನಲ್ಲಿ ಅಡಿಷನ್ ನಡೆಸಲಾಗುತ್ತಿದ್ದು ಬೆಂಗಳೂರಿನಲ್ಲಿ ಮುಗಿದಿದ. ಸ್ಪರ್ಧೆಯ ಅಂತಿಮ ಸುತ್ತಿಗೆ 15 ಮಂದಿಯನ್ನು ಆಯ್ಕೆ ಮಾಡಲಾಗುವುದು. ಪ್ರಸ್ತುತ ನಡೆಯುತ್ತಿರುವ ರಿಯಾಲಿಟಿ ಶೋಗಳಲ್ಲಿ ವಿಕಲಚೇತನರನ್ನು ನಿರ್ಲಕ್ಷಿಸಲಾಗುತ್ತಿದ್ದು ಅವರಲ್ಲಿರುವ ಪ್ರತಿಭೆಯು ಸೂಪ್ತವಾಗಿಯೇ ಉಳಿಯುವುದು. ನಮ್ಮಲ್ಲಿಯೂ ಉತ್ತಮ ಪ್ರತಿಭೆಗಳಿವೆ ಅವರಿಗೆ ವೇದಿಕೆಯನ್ನೊದಗಿಸಲು ಈ ಕಾರ್ಯಕ್ರಮ ನೆರವಾಗುವುದು. ಬಿ-ಟಿವಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ, ರಾಜ್ಯ ಮೂವರು ಸೆಲಿಬ್ರಿಟಿಗಳು ಸೇರಿದಂತೆ ಒಬ್ಬ ವಿಕಲಚೇತನ ಸಂಗೀತಗಾರ ಇರಲಿದ್ದಾರೆ. ಈಗಾಗಲೇ ಅಡಿಷನ್ ಗೆ ನಗರದ 300 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸ್ಪರ್ಧೆಯ ವಿಜೇತರಿಗೆ 5 ಲಕ್ಷ, 3 ಲಕ್ಷ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಸಂಯೋಜಕ ನವೀನ್ ವಜ್ರಪ್ಪ ಮಾತನಾಡಿ, ವಿಶೇಷ ಚೇತನರನ್ನು ನೋಡುವ ದೃಷ್ಟಿಯು ಬದಲಾಗಬೇಕು ಹಾಗೂ ಅವರಲ್ಲಿ ಸಕಾರಾತ್ಮಕ ಭಾವನೆ ತುಂಬಿ ಸೂಪ್ತ ಪ್ರತಿಭೆ ಹೊರಹೊಮ್ಮಿಸಲು ಈ ರಿಯಾಲಿಟಿ ಶೋವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ 9886014851, 8123040624, 9980053238 ಹಾಗೂ 8747881561ಗೆ ಸಂಪರ್ಕಿಸಬಹುದು.

ಸುದ್ದಿಗೋಷ್ಠಿಯಲ್ಲಿ ವಿಕಲಚೇತನರ ಅಭ್ಯುದಯ ಸೇವಾ ಸಂಸ್ಥೆಯ ಪ್ರಭುಸ್ವಾಮಿ ಹಾಗೂ ರಾಷ್ಟ್ರೀಯ ವಾಲಿಬಾಲ್ ಕಮಿಟಿ ಅಧ್ಯಕ್ಷ ರಾಮಚಂದ್ರ, ಪುಟ್ಟಸ್ವಾಮಿ ಉಪಸ್ಥಿತರಿದ್ದರು.

Leave a Reply

comments

Related Articles

error: