ಸುದ್ದಿ ಸಂಕ್ಷಿಪ್ತ

ರಾಷ್ಟ್ರೀಯ ಕೌಶಲ್ಯ ದಿವಸ ನಾಳೆ

ಮೈಸೂರು,ಆ.2 : ನೆಹರು ಯುವ ಕೇಂದ್ರ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ‘ರಾಷ್ಟ್ರೀಯ ಕೌಶಲ್ಯ ದಿವಸ’ ಅನ್ನು ಆ.3ರಂದು ಬೆಳಗ್ಗೆ 11 ಗಂಟೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.

ಎನ್.ಎಸ್.ಎಸ್ ಸಂಯೋಜನಾಧಿಕಾರಿ ಪ್ರೊ.ಬಿ.ಎಸ್.ಚಂದ್ರಶೇಖರ್ ಉದ್ಘಾಟಿಸುವರು, ಬಲ್ಲೇನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಸಿ.ಆರ್.ದಿನೇಶ್ ಅಧ್ಯಕ್ಷತೆ ವಹಿಸುವರು, ಪ್ರೊ.ಎಂ.ಎಸ್.ಮನೋನ್ಮಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು ಹಾಗೂ ಇತರರು ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: