ಮೈಸೂರು

ಹಿಂದೂಸ್ಥಾನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ

ಮೈಸೂರು,ಆ.3:- ಹಿಂದೂಸ್ಥಾನ್ ಪ್ರಥಮ ದರ್ಜೆ ಕಾಲೇಜು, ಜೆ.ಪಿ. ನಗರ, ಮೈಸೂರು    ““Students Council Inauguration and First Issue of Voice of Hindustan – a monthly Newsletter”ಒಂದು ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಇಂಡಿಯನ್ ಟಿವಿ ಚಾನೆಲ್‍ನ ವ್ಯವಸ್ಥಾಪಕ ನಿರ್ದೇಶಕರಾದ   ವೆಂಕಟೇಶ್‍ಕುಮಾರ್ ಹಾಗೂ ಡಿ.ಎ.ವಿ. ಪಬ್ಲಿಕ್ ಸ್ಕೂಲ್‍ನ ಮತ್ತು ಎಸ್.ವಿ.ಎಂ. ಪಿಯು ಕಾಲೇಜಿನ ಅಧ್ಯಕ್ಷರಾದ   ಸಚ್ಚಿದಾನಂದ ಮೂರ್ತಿ, ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾರ್ಥನೆ ಗೀತೆಯನ್ನು ಪ್ರಥಮ ಬಿ.ಕಾಂ. ವಿದ್ಯಾರ್ಥಿಯಾದ ದಾಮೋದರ್‍  ಹಾಡಿದರು.

ಈ ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಮೂರ್ತಿಯವರು, ಚುನಾವಣೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸುತ್ತ, ಜೀವನಲ್ಲಿ ಯಾವ ವಿಷಯಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಡಾ. ಎ.ಪಿ.ಜೆ ಅಬ್ದುಲ್ ಕಲಾಂ, ಹೆಚ್.ಡಿ. ದೇವೇಗೌಡ, ಅಬ್ರಹಾಂ ಲಿಂಕನ್‍ರವರ ಜೀವನದ ಕೆಲವು ವಿಶೇಷ ಮಾಹಿತಿಗಳನ್ನು ನೀಡಿದರು.

ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷನಾಗಿ-ಮೊಹಮ್ಮದ್ ಶಕೀಲ್, ತೃತೀಯ ಬಿ.ಕಾಂ., ಉಪಾಧ್ಯಕ್ಷಳಾಗಿ – ಪೂಜಾ ಸಿ, ತೃತೀಯ ಬಿಸಿಎ, ಪ್ರಧಾನ ಕಾರ್ಯದರ್ಶಿಯಾಗಿ–ವಿಷ್ಣು ಪ್ರಿಯ, ದ್ವಿತೀಯ ಬಿ.ಕಾಂ. ಜಂಟಿ ಕಾರ್ಯದರ್ಶಿಯಾಗಿ-  ಪೃಥ್ವಿ ಕೆ, ಪ್ರಥಮ ಬಿ.ಕಾಂ, ಕ್ರೀಡಾ ಕಾರ್ಯದರ್ಶಿಯಾಗಿ-ನಾಗರ್ಜುನ್, ದ್ವಿತೀಯ ಬಿಸಿಎ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ-ಚಂದ್ರಶೇಖರ್ ಬಿ, ತೃತೀಯ ಬಿ.ಕಾಂ., ಇವರುಗಳು ಪ್ರಮಾಣ ವಚನವನ್ನು ಸ್ವೀಕರಿಸುವುದರ ಮೂಲಕ ತಮ್ಮ ಸ್ಥಾನವನ್ನು ಅಂಗೀಕರಿಸಿದರು.

ಅಲ್ಲದೆ “Voice of Hindustan”  ಮಾಸಿಕ ನ್ಯೂಸ್‍ಪತ್ರಿಕೆಯನ್ನು ಮೊದಲ ಬಾರಿಗೆ ಬಿಡುಗಡೆಮಾಡಲಾಯಿತು. ಅಲ್ಲದೆ  ಕಾರ್ಯಕ್ರಮದಲ್ಲಿ ಮೇಘನ, ಪ್ರಥಮ ಬಿಬಿಎ(ಏ.ಮ್ಯಾ) ಹಾಗೂ ಮೊಹಮ್ಮದ್ ಶಕೀಲ್, ತೃತೀಯ ಬಿ.ಕಾಂ., ಇವರುಗಳು ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿ ಕಲ್ಯಾಣಧಿಕಾರಿಯಾದ ಧನಲಕ್ಷ್ಮಿರವರು ವಿದ್ಯಾರ್ಥಿ ಚುನಾವಣಾ ಮಾಹಿತಿಯನ್ನು ನೀಡಿದರು. ನಾಗಶ್ರೀ, ಮುಖ್ಯ ಸಂಪಾದಕರು, ಇವರು ನ್ಯೂಸ್‍ಪತ್ರಿಕೆಯ ಬಗ್ಗೆ ಕೆಲವು ಮಾಹಿತಿ ನೀಡಿದರು. ಸಂಜಯ್‍ಕುಮಾರ್, ತೃತೀಯ ಬಿಬಿಎ ವಂದನಾರ್ಪಣೆಯನ್ನು ಅರ್ಪಿಸಿದರು. ನಮ್ರತಾ, ತೃತೀಯ ಬಿ.ಕಾಂ. ಇವರು ಕಾರ್ಯಕ್ರಮದ ನಿರೂಪಕರಾಗಿ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಜೆ. ಪ್ರಿಯ, ವಿಶೇಷ ಅಧಿಕಾರಿಯಾದ   ಏಬೆಲ್ ಮ್ಯಾಥ್ಯೂ ಪ್ರಸಾದ್, ವಿಭಾಗದ ಅಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.  (ಎಸ್.ಎಚ್)

Leave a Reply

comments

Related Articles

error: