ಮೈಸೂರು

ವರದಕ್ಷಿಣೆ ತರುವಂತೆ ದೈಹಿಕ ಹಲ್ಲೆ ನಡೆಸಿ, ಕೊಲೆ ಬೆದರಿಕೆ : ಮಹಿಳಾ ಠಾಣೆಗೆ ದೂರು

ಮೈಸೂರು,ಆ.3:- ವರದಕ್ಷಿಣೆ ತರುವಂತೆ ದೈಹಿಕ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿ  ಮಹಿಳೆಯೋರ್ವರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

#1828, ಕೆ-30/1, 02 ನೇ ಕ್ರಾಸ್, ಹುಲ್ಲಿನ ಬೀದಿ, ಕೆ ಆರ್ ಮೊಹಲ್ಲಾ ರಬೀಯಾ ಸುಲ್ತಾನ ಎಂಬವರೇ ದೂರು ದಾಖಲಿಸಿದವರಾಗಿದ್ದು,  25.02.2007 ರಂದು   ಸೈಯ್ಯದ್ ಶಫೀಕ್ ಉರ್-ರಹಮಾನ್ ಅವರನ್ನು ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ   ಅಲ್ತಾಫ್ ಖಾನ್,   ಹಸೀನಾ ಅವರುಗಳ ಒತ್ತಾಯದ ಮೇರೆಗೆ ವರದಕ್ಷಿಣೆಯಾಗಿ 10 ಲಕ್ಷ ರೂ ನಗದು ಹಣ, ಚಿನ್ನದ ಉಂಗುರಗಳು, ಚಿನ್ನದ ಸರ, ಕೈ ಗಡಿಯಾರ, ಸೂಟು, ಪೀಠೋಪಕರಣಗಳನ್ನು ಕೊಡಲಾಗಿದೆ. ಮದುವೆಯಾದ ನಂತರ  ಸೈಯ್ಯದ್ ಶಫೀಕ್ ಉರ್-ರಹಮಾನ್ ಅವರ ಮನೆಯಲ್ಲಿ ಸುಮಾರು ಒಂದು ವರ್ಷಗಳ ಕಾಲ ಅನ್ಯೋನ್ಯತೆಯಿಂದ ವಾಸವಾಗಿದ್ದು, ನಂತರದ ದಿನಗಳಲ್ಲಿ ಆರೋಪಿತರು ಮನೆಯ ಮೇಲಿನ ಸಾಲಕ್ಕಾಗಿ   ಒಡವೆಗಳನ್ನು ಗಿರವಿ ಇಟ್ಟಿದ್ದರು. ತದನಂತರದಲ್ಲಿ   ಜಗಾಲಾ ಅವರ ಮದುವೆಗೆ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿದ್ದಾರೆ. ನನಗೆ ಹೆಣ್ಣು ಮಗುವಾಗಿದ್ದು, ಆ ಸಮಯದಲ್ಲಿ  ಹೆಣ್ಣು ಮಗುವೆಂದು ಹೇಳಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ. ನಂತರ  ಸೈಯ್ಯದ್ ಶಫೀಕ್ ಉರ್-ರಹಮಾನ್ ಸೌದಿ ಅರೇಬಿಯಾದಲ್ಲಿದ್ದುದರಿಂದ ಅವರ ಬಳಿ ವಾಸವಾಗಿದ್ದು, ಆ ಸಮಯದಲ್ಲಿ ಹೆಣ್ಣು ಮಗು ಎಂದು ಹೇಳಿ ಅಬಾರ್ಷನ್ ಮಾಡಿಸುವಂತೆ ಹಿಂಸೆ ನೀಡುತ್ತಿದ್ದುದಲ್ಲದೇ ತಲಾಖ್ ಕೊಡುವುದಾಗಿಯೂ, ಕೊಲೆ ಮಾಡುವುದಾಗಿ ಬೆದರಿಸಿದ್ದು, ಒಡವೆಗಳನ್ನು ಕಸಿದುಕೊಂಡು ಹೊರಗೆ ಹಾಕಿದ್ದರಿಂದ ಇಂಡಿಯಾಕ್ಕೆ ಬಂದೆ. 2ನೇ ಮಗುವಾದ ನಂತರ ತವರು ಮನೆಯಲ್ಲಿ ವಾಸವಿದ್ದು,  ಪತಿಯ ನನ್ನ ಮತ್ತು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳದೇ ಇದ್ದುದರಿಂದ  ಉದಯಗಿರಿಯ ಮನೆಗೆ ಹೋದಾಗ  ಸೈಯ್ಯದ್ ಶಫೀಕ್ ಉರ್-ರಹಮಾನ್, ಸೈಯ್ಯದಾ ಅಮ್ತುಲ್ ಅಜೀಜ್, , ಕನೀಜ್ ಫಾತೀಮಾ, , ಮಹ್ಮದ್ ಜಾಕೀರ್, , ಮಹ್ಮದ್ ಜುಬೇರ್, ಯೂನುಸ್,  ಸೈಫ್, ಅಸದ್ ಪಾಷ, ಸೈಯದ್ ಜಮೀರ್, ಅಲ್ತಾಫ್ ಖಾನ್ ಮತ್ತು ಹಸೀನಾ ಅವರುಗಳು ಜಗಳವಾಡಿ ದೈಹಿಕ ಹಲ್ಲೆ ನಡೆಸಿ ಹೆಚ್ಚಿನ ವರದಕ್ಷಿಣೆಯಾಗಿ 12 ಲಕ್ಷ ರೂಪಾಯಿ ಹಣವನ್ನು ತರುವಂತೆ ಬೆದರಿಕೆ ಹಾಕಿದ್ದಾರೆಂದು   ದೂರಿನಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: