ಮೈಸೂರು

ಸಿ.ಎಸ್.ಐ ಹೋಲ್ಡ್ ಸ್ವರ್ತ್ ಮೆಮೊರಿಯಲ್ ಆಸ್ಪತ್ರೆ : ಚಾರಿಟಿ ಷೋ

ಸಿ.ಎಸ್.ಐ ಹೋಲ್ಡ್ ಸ್ವರ್ತ್ ಮೆಮೊರಿಯಲ್ ಮಿಷನ್ ಆಸ್ಪತ್ರೆಯು ದೇಣಿಗೆ ಸಹಾಯಾರ್ಥ ಫೆ.18ರಂದು ಅಂತರರಾಷ್ಟ್ರೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ.ಕಾರಟ್‍ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಸ್ಪತ್ರೆಯ ನಿರೀಕ್ಷಿತ ನೂತನ ಯೋಜನೆಗಳಾದ ತೀವ್ರ ನಿಗಾಘಟಕ, ಶಸ್ತ್ರ ಚಿಕಿತ್ಸಕ ಕೊಠಡಿ ಹಾಗೂ ವಾರ್ಡ್‍ಗಳ ನಿರ್ಮಾಣ ಸಹಾಯಾರ್ಥ ಮೈಸೂರು ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುಕೆಯ ಟೊಕ್ಟಾ ಮ್ಯೂಸಿಕಲ್ ಪ್ರೊಡಕ್ಷನ್‍ ನ ನೂರು ಮಂದಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಪ್ರವೇಶ ದರ, ಸಾವಿರ, ಐದುನೂರು ಹಾಗೂ ಇನ್ನೂರು ರೂಪಾಯಿಗಳಾಗಿದ್ದು ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಲಾಗಿದೆ ಎಂದರು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :0821-400700, 9538820278 ಹಾಗೂ 9448764150  ಸಂಪರ್ಕಿಸಬಹುದು.

Leave a Reply

comments

Related Articles

error: