ಮೈಸೂರು

ಮಹರ್ಷಿ ದಯಾನಂದ ಸರಸ್ವತಿ ಸಂಸ್ಮರಣೋತ್ಸವ ಫೆ.18ಕ್ಕೆ

ಮೈಸೂರಿನ ಆರ್ಯ ಸಮಾಜದಿಂದ ಮಹರ್ಷಿ ದಯಾನಂದ ಸರಸ್ವತಿ ಸಂಸ್ಮರಣೋತ್ಸವ ಹಾಗೂ ಕನ್ವೆನ್‍ಷನ್ ಹಾಲ್ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಸಲಹೆಗಾರ ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವೇಶ್ವರನಗರದಲ್ಲಿ ಪುನರ್ ನವೀಕರಣಗೊಂಡ ವಿದ್ಯಾರಣ್ಯ ಕನ್ವೆನ್‍ಷನ್ ಹಾಲ್‍ ಉದ್ಘಾಟನೆಯನ್ನು ಫೆ.18ರಂದು ಬೆಳಿಗ್ಗೆ 10,30ಕ್ಕೆ ಶಾಸಕ ಎಂ.ಕೆ.ಸೋಮಶೇಖರ್ ನೆರವೇರಿಸುವರು, ಪಾಲಿಕೆ ಸದಸ್ಯ ಉಮಾಮಣಿ ಮಹದೇವ ಉಪಸ್ಥಿತರಿರುವರು. ಹಿಂದಿಯಲ್ಲಿ ‘ವೈದಿಕ ಭಾಗವತ್’ ಆಚಾರ್ಯ ನರೇಶ್ ಜೀ ಹಾಗೂ ಸಂಜೆ 4.30ಕ್ಕೆ ಯೋಗಜೀವನದ ಪದ್ಧತಿ ಪ್ರವಚನವನ್ನು ಸ್ವಾಮಿ ಬ್ರಹ್ಮದೇವಜೀ ನೀಡುವರು.

ಫೆ.19ರ ಭಾನುವಾರ ಬೆಳಿಗ್ಗೆ 8ಕ್ಕೆ ಮಹಿಳಾ ಪೌರೋಹಿತ್ಯರಿಂದ ಯಜ್ಞ, ನಂತರ ಸ್ವಾಮಿ ಬ್ರಹ್ಮದೇವಜೀ   ಹಾಗೂ ‘ಆರ್ಯ ಸಮಾಜ ಹಾಗೂ ಮಹರ್ಷಿ ದಯಾನಂದ ಸರಸ್ವತಿ’ ಆಚಾರ್ಯ ನರೇಶ್ ಜೀ ಪ್ರವಚನ ನೀಡುವರು.

ದಯಾನಂದ ಸರಸ್ವತಿ ಮಹದಾಶೆಯಂತೆ ಮಹಿಳೆಯರಿಗೆ ಪೌರೋಹಿತ್ಯ, ವೇದಮಂತ್ರಗಳ ಪಾಠವನ್ನು ಸಂಸ್ಥೆಯಿಂದ ನೀಡಲಾಗುತ್ತಿದ್ದು ಈಗಾಗಲೇ ಹಲವಾರು ಜನ ಮಹಿಳೆಯರು ಪೌರೋಹಿತ್ಯದಲ್ಲಿ ಉತ್ಕೃಷ್ಟ ತರಬೇತಿಯನ್ನು ಹೊಂದಿದ್ದಾರೆ ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ನೇಮಿಚಂದ್ರ, ಮುಖಂಡರಾದ ಡಾ.ವಿದ್ಯಾ, ಡಾ.ವಿನಯ್, ಶ್ರೀನಿವಾಸ್ ಹಾಗೂ ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: