ಪ್ರಮುಖ ಸುದ್ದಿಮೈಸೂರು

ಎಂಡೋಸಲ್ಫಾನ್ ಪೀಡಿತರ ಚಿತ್ರ ‘ಆಂಗಿಕಂ’ : ಚಿತ್ರದ ಬಗ್ಗೆ ನಿರ್ದೇಶಕ ಏನ್ ಹೇಳಿದ್ರೂ ಗೊತ್ತಾ ?

ಮೈಸೂರು.ಆ.3: ಕ್ರಿಮಿನಾಶಕ ಎಂಡೋಸಲ್ಫಾನ್ ದುಷ್ಪರಿಣಾಮದ ಜಾಗೃತಿ ಸಂದೇಶ ಹಾಗೂ ‌ಪೀಡಿತರ ಭಾದೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ವಿಸ್ಮಯ ಕ್ರಿಯೇಷನ್ಸ್ ವತಿಯಿಂದ ಚಲನಚಿತ್ರ “ಆಂಗಿಕಂ” ನಿರ್ಮಾಣಗೊಂಡಿದೆ ಎಂದು ಚಿತ್ರ ನಿರ್ದೇಶಕ ಚಂದ್ರ ಪ್ರಭಾ ತಿಳಿಸಿದರು.

ದಕ್ಷಿಣಕನ್ನಡ ಜಿಲ್ಲೆಯಲ್ಲಿ 1980ರ ವೇಳೆ ಎಂಡೋಸಲ್ಫಾನ್ ಬೀರಿದ ದುಷ್ಪರಿಣಾಮದಿಂದ ಆ ಪ್ರದೇಶದ ಸುಮಾರು ಐದು ತಲೆಮಾರು  ಅಂಗವಿಕಲರಾಗಿ ಜೀವನ ಸಾಗಿಸುತ್ತಿದ್ದು. ಅಲ್ಲಿನ ಕುಟುಂಬಗಳ ಕರುಣಾಜನಕ ಕಥೆಯನ್ನು ಸಮಾಜಕ್ಕೆ ತಿಳಿಸುವ ಸದುದ್ದೇಶದಿಂದ ಹಾಗೂ ಅಂತಹವರಿಗೆ‌ ಕೈಲಾದ ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ಚಿತ್ರ ನಿರ್ಮಿಸಲಾಯಿತು  ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯ ಸಾಹಿತಿ ನಾಡೋಜ ಚನ್ನವೀರ ಕಣಿವಿಯವರು ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿದ್ದು, ಮೈಸೂರಿನ ಅತಿಶಯ ಜೈನ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಮಜಾ ಟಾಕೀಸ್ ಕಲಾವಿದರು. ಬಾಲನಟರಾದ ಆದಿತ್ಯ, ಆರಾಧನಾ ಭಟ್. ಐಶ್ವರ್ಯ ಮತ್ತು ಎಂಡೋಸಲ್ಫಾನ್ ಪೀಡಿತರ ಕುಟುಂಬಗಳನ್ನೇ ಚಿತ್ರದಲ್ಲಿ ಬಳಸಲಾಗಿದೆ ಎಂದರು.

ಚಿತ್ರ ನಿರ್ಮಾಪಕ ಆಲ್ತಿ ಲೋಕೇಶ್ ಮಾತನಾಡಿ ಸಾವಿರಾರು ಕುಟುಂಬಗಳು ಈ ಕ್ರಿಮಿನಾಶಕದಿಂದ ಸಂಕಷ್ಟಕ್ಕೀಡಾಗಿರುವರು, ಅವರ ನೋವಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಚಿತ್ರ ನಿರ್ಮಿಸಿದ್ದು, ಚಿತ್ರ ನೋಡಿದವರು ಆ ಕುಟುಂಬಗಳಿಗೆ ಸಹಾಯ ಮಾಡಿದರೆ ತಮ್ಮ ಉದ್ದೇಶ ಸಾರ್ಥಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಚಿತ್ರೀಕರಣ ಪೂರ್ಣಗೊಂಡಿದ್ದು ಮುಂದಿನ ತಿಂಗಳಲ್ಲಿ ರಾಜ್ಯಾಧ್ಯಂತ ಬಿಡುಗಡೆಗೊಳಿಸಲಾಗುವುದು ಎಂದರು.

ಬಾಲನಟರಾದ ಆಧಿತ್ಯ, ಆರಾಧನಾ ಭಟ್, ಐಶ್ವರ್ಯ, ಸಹ ನಿರ್ದೇಶಕ ನಿಂಗರಾಜು, ಸಂಗೀತ ನಿರ್ದೇಶಕ ಅತಿಶಯ ಜೈನ್ ಹಾಗೂ ಇತರರು ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: