ಮೈಸೂರು

ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಎನ್.ಎ.ಬಿ.ಹೆಚ್. ಅರ್ಹತೆಯ ಪ್ರಮಾಣಪತ್ರ

ಕಾವೇರಿ ಹೃದಯ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ರಾಷ್ಟ್ರೀಯ ಮಾನ್ಯತಾ ಗುಣಮಟ್ಟದ ಆರ್ಹತೆಯ ಆಸ್ಪತ್ರೆ ಎನ್ನುವ ಪ್ರಮಾಣ ಪತ್ರ ಲಭಿಸಿದೆ. ಈ ಪ್ರಮಾಣಪತ್ರ  ಪಡೆದ ನಗರದ ಏಕೈಕ ಆಸ್ಪತ್ರೆಯಾಗಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಡಾ.ಚಂದ್ರಶೇಖರ್ ಜಿ.ಆರ್. ಸುದ್ದಿಗೋಷ್ಠಿಯಲ್ಲಿ ಸಂತಸ ವ್ಯಕ್ತಪಡಿಸಿದರು.

ಪ್ರಸಕ್ತ ಸಾಲಿನಲ್ಲಿ ಆಸ್ಪತ್ರೆಗೆ ರಾಷ್ಟ್ರೀಯ ಮಾನ್ಯತೆ ಗೌರವ ಲಭಿಸಿರುವುದು ಸಂತೋಷವಾಗಿದೆ.  ಮಾನ್ಯತೆಗೆ ಪ್ರಮುಖ ಮಾನದಂಡವಾದ ಆಸ್ಪತ್ರೆಯಲ್ಲಿ ಸುಸಜ್ಜಿತ ಐದು ವಿಧದ ತೀವ್ರ ನಿಗಾ ಘಟಕಗಳು, ನೂರು ಹಾಸಿಗೆಗಳ ಸಾಮಾರ್ಥ್ಯ, ನರ, ಬೆನ್ನುಹುರಿ, ಮೂಳೆ,ಸಂಧಿ, ಉದರ ದರ್ಶಕ ಶಸ್ತ್ರ ಚಿಕಿತ್ಸೆ, ಉತ್ಕೃಷ್ಠ ಮಟ್ಟದ ಯಂತ್ರೋಪಕರಣಗಳಿಂದ ಶಸ್ತ್ರ ಚಿಕಿತ್ಸೆ, ಪ್ರಸೂತಿ, ಮಕ್ಕಳ ಚಿಕಿತ್ಸೆ, ಮೂತ್ರನಾಳ, ಮೂತ್ರಪಿಂಡ, ಚರ್ಮ ರೋಗ, ಹೀಮೋ ಡಯಾಲಿಸಿಸ್ ಚಿಕಿತ್ಸೆಯಂತಹ ಅತ್ಯಾಧುನಿಕ ಉತ್ತಮ ಸೌಲಭ್ಯವನ್ನು ಆಸ್ಪತ್ರೆ ಹೊಂದಿರುವುದನ್ನು ಮಾನ್ಯತೆಗೆ ಪರಿಗಣಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೇ ಆಸ್ಪತ್ರೆಯ ನಿರ್ವಹಣೆ, ಅಗ್ನಿ ಅನಾಹುತಗಳ ಪ್ರಾಥಮಿಕ ಸುರಕ್ಷೆ, ವೈದ್ಯರ ಮತ್ತು ಸುಶ್ರೂಶಕರ ರೋಗಿಗಳೊಂದಿಗಿನ ಸಾಮರಸ್ಯವನ್ನು ಪರಿಗಣಿಸಲಾಗಿದೆ ಎಂದರು. ಮಾನ್ಯತೆಯೂ ಎರಡು ವರ್ಷಗಳ ಕಾಲಾವಧಿಯಾಗಿದ್ದು ಶಾಶ್ವತವಾಗಿ ಕಾಯ್ದುಕೊಳ್ಳಲು ಶ್ರಮಿಸಲಾಗುವುದು ಎಂದರು. ಡಾ.ರಾಜೀವ್ ಹಾಗೂ ಇತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: