ಮೈಸೂರು

ವಿಶೇಷವಾದ ಗ್ರಾಹಕ ಸ್ನೇಹಿ ‘ಫೋರಂ ಆಹಾರ ಮೇಳ’ ಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ

ಮೈಸೂರು,ಆ.4:-  ಫೋರಂ ಮಾಲ್,ಓಶನ್ ಟೂ ಸ್ಕೈ ಸಹಯೋಗದೊಂದಿಗೆ ವಿಶೇಷವಾದ ಗ್ರಾಹಕ ಸ್ನೇಹಿ ‘ಫೋರಂ ಆಹಾರ ಮೇಳ’ ಆಯೋಜಿಸಲಾಗಿತ್ತು.
ಫೋರಂ ಮಾಲ್ ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಆಹಾರ ಮೇಳಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಟೇಪ್ ಕತ್ತರಿಸಿ ನಿನ್ನೆ ಚಾಲನೆ ನೀಡಿದರು.
ಮೇಳದಲ್ಲಿ ರುಚಿಕರವಾದ ಬಾಯಿ ಚಪ್ಪರಿಸುವ ಚೈನೀಸ್, ಕಾಂಟಿನೆಂಟಲ್, ದಕ್ಷಿಣ, ಉತ್ತರ ಭಾರತದ ಪಾನೀಪುರೀ,ಚುರುಮುರಿ,ಸ್ಪೇಷಲ್ ಸೋಡಾ, ಮಸಾಲ ಫುಡ್,ಐಸ್ ಕ್ರೀಂ,ಬಿರಿಯಾನಿ ಸೇರಿದಂತೆ ಸಿಹಿ ಫುಡ್ ಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಅದಲ್ಲದೇ ಮಕ್ಕಳಿಗಾಗಿ ಆಟಿಕೆ ವಸ್ತುಗಳು ಮಾರಾಟವಾಗುತ್ತಿದೆ.

ಮೇಳದೊಂದಿಗೆ ವಿವಿಧ ಮನೋರಂಜನಾತ್ಮಕ ಕ್ರೀಡೆಗಳನ್ನು ಆಯೋಜಿಸಿದ್ದು,ಮೇಳಕ್ಕೆ ಉಚಿತ ಪ್ರವೇಶವಿದೆ. ಫೋರಂ ಮಾಲ್ ಗೆ ಬಂದ ಗ್ರಾಹಕರು ಒಮ್ಮೆ ಫೋರಂ ಆಹಾರ ಮೇಳಕ್ಕೆ ಆಗಮಿಸಿ ತಮಗಿಷ್ಟವಾದ ಖಾದ್ಯಗಳನ್ನು ಸವಿಯಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: