ಮೈಸೂರು

ಬಲಿಜ ಸಂಘಮ್‍ ವಿದ್ಯಾರ್ಥಿ ನಿಲಯ ನಿವೇಶನ ಅಕ್ರಮ ಕಬಳಿಕೆಗೆ ಹುನ್ನಾರ : ದಾನಿಗಳಿಂದ ಆರೋಪ

ಬಲಿಜ ಸಂಘಮ್‍ನ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಸಂಘದ ಕೆಲವು ಪಟ್ಟಭದ್ರರು ಕಬಳಿಸುವ ಹುನ್ನಾರವನ್ನು ನಡೆಸಿರುವುದು ಖಂಡನೀಯ. ಕಾನೂನಿನಂತೆ ಆಸ್ತಿಯನ್ನು ಯಥಾಪ್ರಕಾರ ಕಾಯ್ದುಕೊಳ್ಳಬೇಕು ಇಲ್ಲವಾದಲ್ಲಿ ತಪ್ಪಿತಸ್ಥರ ವಿರುದ್ಧ ನ್ಯಾಯಾಂಗ ಹೋರಾಟ ನಡೆಸಲಾಗುವುದು ಎಂದು ನ್ಯಾಯವಾದಿ ಎ.ಅನೂಪ್‍ಕುಮಾರ್ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಪತ್ರಕರ್ತರ ಭವನದಲ್ಲಿ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಳೀಯ ಮಾರುತಿ ಮೋಟಾರ್ ಸರ್ವಿಸ್ ಮಾಲೀಕರು ಮತ್ತು ಸಹೋದರರಾದ ದಿ.ತಂಗವೇಣು ನಾಯ್ಡು, ದಿ.ಕುಮಾರಸ್ವಾಮಿ ಹಾಗೂ ಮುನಿಸ್ವಾಮಿ ನಾಯ್ಡು ಅವರುಗಳು ಮೈಸೂರಿನ, ಜಯನಗರದ ನಂ.52, ಕೃಷ್ಣದೇವರಾಯ ರಸ್ತೆ, ಕೌಶಿಕ್ ವಿದ್ಯಾರ್ಥಿ ನಿಲಯದ ಪಕ್ಕ ಸುಮಾರು 3,520 ಚದರ ಮೀಟರ್ ಅಳತೆಯ ನಿವೇಶನವನ್ನು ಸಂಘದ ವಿದ್ಯಾರ್ಥಿ ನಿಲಯ ಸ್ಥಾಪನೆ ಉದ್ದೇಶಕ್ಕೆ ಪೂರ್ಣ ಪ್ರಮಾಣದ ದೇಣಿಗೆಯನ್ನು ನೀಡಿದ್ದರು, ಸದ್ರಿ ನಿವೇಶನದಲ್ಲಿ 1,972ರವರೆಗೆ ವಿದ್ಯಾರ್ಥಿ ನಿಲಯವೂ ನಡೆದಿದೆ. ದಾನಿಗಳ ನಿಧನಾ ನಂತರ ನಿವೇಶನ ಕಬಳಿಕೆಗೆ ಹುನ್ನಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳು ಹಾಗೂ ಮುಡಾ ಸಿಬ್ಬಂದಿಗಳ ನಡೆಯೂ ಅನುಮಾನಾಸ್ಪದವಾಗಿದ್ದು ಯಥಾಸ್ಥಿತಿ ಮುಂದುವರೆಯದೆ ಹೋದರೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ದಿ.ಕುಮಾರಸ್ವಾಮಿ ನಾಯ್ಡು ಮಕ್ಕಳಾದ ನಿರ್ಮಲ ನಾಯ್ಡು, ವಿಮಲಾ ಅಶೋಕ್, ವಸಂತದಾಸ್ ಹಾಗೂ ಸಾವಿತ್ರಿ ಮೋಹನ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

Leave a Reply

comments

Related Articles

error: