ದೇಶಪ್ರಮುಖ ಸುದ್ದಿ

ಜಿಯೋ ಎಂಟ್ರಿಯಿಂದ ತಲ್ಲಣ: ಏರ್ಟೆಲ್ ನಿಂದ 90 ದಿನಗಳ ಉಚಿತ 4ಜಿ ಡೇಟಾ ಆಫರ್

ರಿಲಾಯನ್ಸ್ ಜಿಯೋ ವಿಶೇಷ ಆಫರ್ ಗಳೊಂದಿಗೆ ಎಲ್ಲ ಗ್ರಾಹಕರನ್ನು ತನ್ನೆಡೆ ಸೆಳೆದು ಇತರ ಎಲ್ಲ ಮೊಬೈಲ್ ಕಂಪೆನಿಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಹೆಣೆಗಾಡುತ್ತಿವೆ. ಕರೆ ದರ, ಇಂಟರ್ನೆಟ್ ದರಗಳಲ್ಲಿ ಸ್ವಲ್ಪನೂ ಬದಲಾವಣೆ ಮಾಡದ ಕಂಪೆನಿಗಳು ಈಗ ಏಕಾಏಕಿ ದರ ಕಡಿತ ಮಾಡಲಾರಂಭಿಸಿವೆ.

ಏರ್ಟೆಲ್ 4ಜಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 90 ದಿನಗಳ ಉಚಿತ 4ಜಿ ಡೇಟಾ ಆಫರ್ ನೀಡುತ್ತಿದೆ. ಏರ್ಟೆಲ್ ಗ್ರಾಹಕರು 1,495 ರು. ರಿಚಾರ್ಜ್ ಮಾಡಿಸಿ ಈ ಆಫರ್ ಪಡೆಯಬಹುದಾಗಿದ್ದು, ಹೊಸ ಗ್ರಾಹಕರು 1,494 ರು. ರಿಚಾರ್ಜ್ ಮಾಡಿ 4ಜಿ ಡೇಟಾ ಆಫರ್ ಲಾಭ ಪಡೆಯಬಹುದು.

ಭಾರತಿ ಏರ್ಟೆಲ್ನ ನಿರ್ದೇಶಕ(ಭಾರತ ಮತ್ತು ದಕ್ಷಿಣ ಏಷ್ಯಾ ಕಾರ್ಯನಿರ್ವಾಹಕ) ಅಜಯ್ ಪುರಿ ಮಾತನಾಡಿ, 4ಜಿ ಗ್ರಾಹಕರು ದೊಡ್ಡ ಪ್ರಮಾಣದ ಡೇಟಾವನ್ನು ಬಳಸುತ್ತಾರೆ. ಇವರನ್ನೇ ಗುರಿಯಾಗಿಸಿ ಈ ಆಫರ್ ಯೋಜಿಸಲಾಗಿದೆ. ಈ ಆಫರ್ ನ ಬಳಕೆದಾರರು ದಿನದ 24 ಗಂಟೆಯೂ ಗ್ರಾಹಕರು ಆನ್ಲೈನ್ ನಲ್ಲಿ ನಿಶ್ಚಿಂತೆಯಿಂದ ಇರಬಹುದು. ಡೇಟಾ ಬೇಗ ಖರ್ಚಾಗುವ ಭಯವೂ ಬೇಡ, ಮತ್ತು ಪದೇಪದೆ ರಿಚಾರ್ಜ್ ಮಾಡಿಸುವ ಅಗತ್ಯವೂ ಇಲ್ಲ ಎಂದು ಹೇಳಿದ್ದಾರೆ.

ಏರ್ಟೆಲ್ ಈ ಹೊಸ ಯೋಜನೆ ದೆಹಲಿ ದೂರ ಸಂಪರ್ಕ ವಲಯದಲ್ಲಿ ಮಾತ್ರ ಜಾರಿಯಾಗುತ್ತಿದ್ದು, ಕೆಲವೇ ದಿನಗಳಲ್ಲಿ ದೇಶದ ಇತರ ಭಾಗಗಳಲ್ಲಿ ಆರಂಭವಾಗಲಿದೆ.  

Leave a Reply

comments

Tags

Related Articles

error: