ಮೈಸೂರು

ಜಿಲ್ಲೆಯಾದ್ಯಂತ ದಲಿತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

ಮೈಸೂರು,ಆ.5:-  ಜಿಲ್ಲೆಯಾದ್ಯಂತ ದಲಿತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಇಂದು ಮೈಸೂರು ಪುರಭವನದಿಂದ ಹೊರಟ ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಸಾಗಿ ಬಂದಿದ್ದು, ಅಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ತಿ.ನರಸೀಪುರ ತಾಲೂಕು ಮಾದಿಗಳ್ಳಿ ಗ್ರಾಮದ ದಲಿತರಿಗೆ ಸರ್ವೇ ನಂ.31/2ರಲ್ಲಿ ನಿವೇಶನ ಮಂಜೂರಾಗಿದ್ದು ಹಕ್ಕು ಪತ್ರ ವಿತರಣೆ ಮಾಡಬೇಕು. ನಗರದ ಮಿನಿ ವಿಧಾನ ಸೌಧದ ಬಳಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು. ಕೊಡಗಳ್ಳಿ ಗ್ರಾಮದ ಪೌರಕಾರ್ಮಿಕರಿಗೆ ವೇತನ ಹಾಗೂ ಸ್ಮಶಾನ ಕಲ್ಪಿಸಬೇಕು. ಹಕ್ಕೂರು ಗ್ರಾಮದಲ್ಲಿ ದಲಿತರ ಚಕ್ರ ಇನಾಮು ಜಮೀನಿನಲ್ಲಿ ಅಕ್ರಮವಾಗಿ ಖಾಸಗಿ ವ್ಯಕ್ತಿ ಸೋಲಾರ್ ಅಳವಡಿಸಿರುವುದನ್ನು ತೆರವುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ  ಈಡೇರಿಕೆಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾವಳ್ಳಿ ಶಂಕರ್, ಮಲ್ಲೇಶ್ ಅಂಬುಗ, ಚಂದು, ಸಿದ್ಧರಾಜು, ಕಾರ್ಯ ಬಸವಣ್ಣ,ನಿಂಗರಾಜ್ ಮಲ್ಲಾಡಿ, ಹೆಚ್.ಬಿ.ದಿವಾಕರ್, ಪುಟ್ಟಲಕ್ಷ್ಮಮ್ಮ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: