ಮೈಸೂರು

ಪೋಷಕರು ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದ ಯುವ ಪ್ರೇಮಿಗಳು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ

ಮೈಸೂರು,ಆ.5:- ಪೋಷಕರು ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದ ಯುವ ಪ್ರೇಮಿಗಳು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರದ ಹೆಮ್ಮಿಗೆ ಸೇತುವೆ ಬಳಿ ನಡೆದಿದೆ.

ಮನು (21) ಹಾಗೂ ದೀಪಶ್ರೀ(16) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದು, ಮನು ಮೂಲತಃ ನಂಜನಗೂಡಿನ ಕಾಮಹಳ್ಳಿ ನಿವಾಸಿಯಾಗಿದ್ದು, ದೀಪಶ್ರೀ ತಿ.ನರಸೀಪುರದ ಶ್ರೀರಾಂಪುರ ಗ್ರಾಮದವಳು.

ದೀಪಶ್ರೀ ಮತ್ತು ಮನು ಕೆಲ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಇಬ್ಬರ ಮನೆಯವರಿಗೂ ತಿಳಿದು ಬುದ್ಧಿ ಮಾತು ಹೇಳಿದ್ದಾರೆ. ನೊಂದ ಯುವ ಪ್ರೇಮಿಗಳು ಮೈಸೂರಿನ ತಲಕಾಡಿನ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: