ಕ್ರೀಡೆ

ತಮ್ಮ ಯೂನಿಟ್​ನ ಯೋಧರ ಜತೆ ವಾಲಿಬಾಲ್​ ಆಡುತ್ತಿರುವ ಸೇನಾ ತರಬೇತಿಯಲ್ಲಿರುವ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಧೋನಿ

ದೇಶ(ನವದೆಹಲಿ)ಆ.5:-  ತಮ್ಮ ಯೂನಿಟ್​ನ ಯೋಧರ ಜತೆ ಸೇನಾ ತರಬೇತಿಯಲ್ಲಿರುವ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಪ್ಯಾರಾಚೂಟ್​ ರೆಜಿಮೆಂಟ್​ನ ಲೆಫ್ಟಿನೆಂಟ್​ ಕರ್ನಲ್​ (ಗೌರವ) ಮಹೇಂದ್ರ ಸಿಂಗ್​ ಧೋನಿ  ವಾಲಿಬಾಲ್​ ಆಡುತ್ತಿರುವ ತುಣುಕು ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕ್ರಿಕೆಟ್​ನಿಂದ 2 ತಿಂಗಳು ಬಿಡುವು ಪಡೆದುಕೊಂಡಿರುವ ಧೋನಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ಯಾರಾಚೂಟ್​ ರೆಜಿಮೆಂಟ್​ನಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ವಿಕ್ಟರ್​ ಫೋರ್ಸ್​ ಎಂಬ ತುಕುಡಿಯಲ್ಲಿ ಆ.15ರವರೆಗೆ ಅವರು ತರಬೇತಿ ಪಡೆಯಲಿದ್ದಾರೆ. ಪಹರೆ, ಕಾವಲು ಮತ್ತು ಸೇನಾಠಾಣೆಯಲ್ಲಿನ ಕಾರ್ಯನಿರ್ವಹಣೆ ಕುರಿತು ತರಬೇತಿ ಪಡೆಯುತ್ತಿದ್ದಾರೆ.

ತರಬೇತಿ ಅವಧಿಯ ಬಳಿಕ ಧೋನಿ ತಮ್ಮ ಯೂನಿಟ್​ನ ಇತರೆ ಯೋಧರೊಂದಿಗೆ ಮಾತನಾಡುತ್ತಾರೆ. ಸಂಜೆ ವೇಳೆ ಅವರು ವಾಲಿಬಾಲ್​ ಆಡಿ ನಲಿಯುತ್ತಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಧೋನಿ ವಾಲಿಬಾಲ್​ ಸರ್ವ್​ ಮಾಡುತ್ತಿರುವ ವಿಡಿಯೋ ತುಣುಕಿನ ಮೂಲಕ ಇದನ್ನು ಖಚಿತಪಡಿಸಿದೆ. 11 ಸೆಕೆಂಡ್​ಗಳ ಈ ದೃಶ್ಯ ಈಗ ವೈರಲ್​ ಆಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: