ಮೈಸೂರು

ಒಲಂಪಿಕ್ಸ್ ಪದಕ ವಿಜೇತ ಸಿಂಧೂ, ಸಾಕ್ಷಿ ಸ್ಪೂರ್ತಿಯಾಗಲಿ: ಸಚಿವ ಹೆಚ್.ಸಿ. ಮಹಾದೇವ ಪ್ರಸಾದ್ ಕರೆ

ಕ್ರೀಡೆಯು ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಾಸಕ್ಕೆ ಅಗತ್ಯವಾಗಿದ್ದು ಕ್ರೀಡಾಪಟುಗಳಿಗೆ ರಿಯೋ ಒಲಂಪಿಕ್ಸ್ ಪದಕ ವಿಜೇತರಾದ ಪಿ.ವಿ.ಸಿಂಧೂ, ಸಾಕ್ಷಿ ಮಲ್ಲಿಕ್ ಅವರು ಸ್ಫೂರ್ತಿಯಾಗಲಿ ಎಂದು ಸಕ್ಕರೆ ಮತ್ತು ಸಹಕಾರ ಸಚಿವ ಹೆಚ್.ಎಸ್. ಮಹಾದೇವ ಪ್ರಸಾದ್ ತಿಳಿಸಿದರು.

ಅವರು ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿಯಲ್ಲಿರುವ ಚೇತನ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಜರುಗಿದ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸಾಕ್ಷಿ ಮಲ್ಲಿಕ್, ವಿಮಾನದಲ್ಲಿ ಹಾರಾಡಬೇಕೆಂಬ ಅದಮ್ಯ ಬಯಕೆ ಹೊಂದಿದ್ದರಿಂದ ಇಂತಹ ಸಾಧನೆ ಸಾಧ್ಯವಾಗಿದೆ. ಪ್ರತಿಯೊಬ್ಬರು ಜೀವನದಲ್ಲಿ ಮಹತ್ವಾಕಾಂಕ್ಷೆ ಹೊಂದಿರಬೇಕೆಂದು ಕರೆ ನೀಡಿದರು.

ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸದ ಧ್ರುವನಾಯಣ ಅವರು, ಪಠ್ಯದಷ್ಟೆ ಕ್ರೀಡೆಗೂ ಮಹತ್ವವಿದ್ದು  ಧೀರ್ಘಕಾಲ ಆರೋಗ್ಯವಂತ ಜೀವನಕ್ಕೆ ಕ್ರೀಡಾಚಟುವಟಿಕೆಗಳು ಅಡಿಪಾಯ ಎಂದರು. ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|| ಬಿ.ಜೆ.ವಿಜಯ್ ಕುಮಾರ್, ಜಿ.ಪಂ.ಸದಸ್ಯ ಶ್ರೀಕೃಷ್ಣ,  ಡಿ.ಡಿ.ಪಿ.ಐ. ರೆಜಿನಾ ಪಿ. ಮಾಲಕಿ, ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಗೋಪಾಲಕೃಷ್ಣ, ಪ್ರದ್ಯುಮ್ನ ಶ್ರೀಕೃಷ್ಣ ಆಲನಹಳ್ಳಿ, ಓಂ ಶ್ರೀ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೇಯ ಅಧ್ಯಕ್ಷ ಶಿವಪ್ಪ ಎ.ಎಸ್. ಉಪಸ್ಥಿತರಿದ್ದರು. ರವೀಶ್.ಎಸ್. ಸ್ವಾಗತಿಸಿದರು, ಚೇತನಾರಾಧ್ಯ ನಿರೂಪಿಸಿದರು.

Leave a Reply

comments

Related Articles

error: