ಮೈಸೂರು

1 ವಾರಕಾಲ ರೈತ ಜಾಗೃತಿ ರಥಯಾತ್ರೆ

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಿಂದಾಗಿ ರೈತರಿಗೆ ಆಗುವ ಸಂಕಷ್ಠಗಳ ಬಗ್ಗೆ ಜಾಗೃತಿ ಮೂಡಿಸಲು ಕಬಿನಿ ರೈತ ಹಿತರಕ್ಷಣಾ ಸಮಿತಿಯು ನಾಳೆಯಿಂದ 7 ದಿನಗಳ ಕಾಲ ‘ರೈತ ಜಾಗೃತಿ ರಥ ಯಾತ್ರೆ’ಯನ್ನು ಕೈಗೊಳ್ಳಲಿದೆ ಎಂದು ಸಮಿತಿಯ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡಳಿಯ ರಚನೆಯಿಂದಾಗಿ ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲು ಕಬಿನಿ ಹುತಾತ್ಮ ರೈತ ಗುರುಸ್ವಾಮಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಈ ಯಾತ್ರೆಯನ್ನು ಆರಂಭಿಸುತ್ತಿದ್ದೇವೆ ಎಂದು ಹೇಳಿದರು.

 ಈ ಯಾತ್ರೆಯು ಹೆಚ್.ಡಿ.ಕೋಟೆ, ನಂಜನಗೂಡು, ಟಿ,ನರಸೀಪುರ, ಮೈಸೂರು. ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ ತಾಲೂಕಿನ ಅಚ್ಚುಕಟ್ಟು ಭಾಗದ ಸುಮಾರು 75 ಹಳ್ಳಿಗಳಲ್ಲಿ ಪ್ರವಾಸ ಮಾಡಿ ಬಹಿರಂಗ ಸಭೆಗಳನ್ನು ನಡೆಸಿ ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಾಗುವುದು . ಅ.05 ರಂದು ಮೈಸೂರಿನಲ್ಲಿ ರೈತರ ಸಮಾವೇಶ ನಡೆಸಿ ನಿರ್ಣಯಗಳನ್ನು ಕೈಗೊಂಡು ರಾಷ್ಟ್ರಪತಿ , ಪ್ರಧಾನಮಂತ್ರಿ, ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಿಗೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ಹೇಳಿದರು.

ಎರಡು ರಾಜ್ಯಗಳ ರೈತ ಪ್ರತಿನಿಧಿಗಳು, ನೀರಾವರಿ ತಜ್ಞರು,  ಕೃಷಿ ತಜ್ಞರು ಒಳಗೊಂಡಂತೆ ಸರ್ಕಾರದ ವತಿಯಿಂದ ಸಭೆ ಕರೆದು ನೀರಿನ ಬಳಕೆ ಬಗ್ಗೆ ಹಾಗೂ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಭೆ ಕರೆಯಬೇಕೆಂದು ರಾಜ್ಯ ಸರ್ಕಾರವನ್ನು ಕೋರಲಾಗುತ್ತದೆ  ಎಂದರು.

ಹೆಚ್ಚಿನ ಮಾಹಿತಿಗಾಗಿ 9448060640 ಗೆ ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಬರಡನಪುರ ಎ.ನಾಗರಾಜು, ರಾಯನಹುಂಡಿ ಪಿ.ರವಿ, ಪುಟ್ಟೇಗೌಡ, ಹುಂಡಿ ಪಿ.ರಾಜು, ಗಳಿಗರ ಹುಂಡಿ ವೆಂಕಟೇಶ್ ಹಾಜರಿದ್ದರು.

Leave a Reply

comments

Related Articles

error: