ಮೈಸೂರು

ಮದ್ಯಪಾನ ನಿಷೇಧ ಪ್ರಯುಕ್ತ ಜಾಗೃತಿ ಜಾಥಾ

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ಮದ್ಯಪಾನ ನಿಷೇಧ ಪ್ರಯುಕ್ತ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರು ನ್ಯಾಯಾಲಯದ ಮುಂಭಾಗ  ಇರುವ ಗಾಂಧೀ ಪುತ್ಥಳಿ ಬಳಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಯೂತ್ ಮೂವ್ ಮೆಂಟ್ ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಮಾತನಾಡಿ ಮದ್ಯಪಾನ ಮಾಡುವುದರಿಂದ ಹಲವು ರೋಗಗಳು ಅಂಟಿಕೊಳ್ಳುವುದಲ್ಲದೇ ಕುಟುಂಬವು ಬೀದಿಪಾಲಾಗಲಿದೆ. ಆದ್ದರಿಂದ ಮದ್ಯವ್ಯಸನವನ್ನು ಬಿಡಬೇಕು ಎಂದರು. ಮದ್ಯಪಾನ ಮಾಡುವುದರಿಂದ  ಆರ್ಥಿಕ ಸ್ಥಿತಿಯು ಕುಂಠಿತವಾಗಲಿದೆ ಎಂದರು.

ಜಾಥಾವು ಗಾಂಧೀ ಪ್ರತಿಮೆಯಿಂದ ಆರಂಭವಾಗಿ  ಅಬಕಾರಿ ಇಲಾಖಾಧಿಕಾರಿಗಳ ಕಚೇರಿ, ಅನಿಕೇತನ್ ರಸ್ತೆ, ಕುವೆಂಪುನಗರ ಸೇರಿದಂತೆ ಹಲವು ಕಡೆಗಳಲ್ಲಿ ಸಂಚರಿಸಿತು.

ಜಾಥಾದಲ್ಲಿ 200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

Leave a Reply

comments

Related Articles

error: