ಮೈಸೂರು

ಶಿಕ್ಷಣದ ಮೂಲ ಉದ್ದೇಶ ದೋಚುವುದು ಬಾಚುವುದು ಅಲ್ಲ. ಅರಿವನ್ನು ಹೆಚ್ಚಿಸಿ ಸಮಸಮಾಜವನ್ನು ನಿರ್ಮಾಣ ಮಾಡುವುದು : ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ

'ಮತ್ತೆ ಕಲ್ಯಾಣ' ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ

ಮೈಸೂರು,ಆ.6:- ಶಿಕ್ಷಣದ ಮೂಲ ಉದ್ದೇಶ ದೋಚುವುದು ಬಾಚುವುದು ಅಲ್ಲ. ಅರಿವನ್ನು ಹೆಚ್ಚಿಸಿ ಸಮಸಮಾಜವನ್ನು ನಿರ್ಮಾಣ ಮಾಡುವುದು ಎಂದು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

ಅವರಿಂದು ಕಲಾಮಂದಿರದಲ್ಲಿ ಸಹಮತ ವೇದಿಕೆ ವತಿಯಿಂದ ‘ಮತ್ತೆ ಕಲ್ಯಾಣ’ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಜಾತೀಯತೆ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಮೀಸಲಾತಿ ಬೇಕು. ನಮ್ಮ ಮಠವೇ ಮರಳು ಸಿದ್ಧರದು. ಅಲ್ಲಿ ಜಾತೀಯತೆ ಇಲ್ಲ. ಎಲ್ಲ ವರ್ಗದ ಜನರಿದ್ದಾರೆ. ಹೆಡ್ ಮಾಸ್ಟರ್ಸ್, ಪ್ರಿನ್ಸಿಪಾಲ್ ರು ಎಲ್ಲ ವರ್ಗದವರೂ ಆಗಿದ್ದಾರೆ. ಕಟ್ಟುವ ಪ್ರಕ್ರಿಯೆಲ್ಲಿ ಏನೇ ಬಂದರೂ ತಾಳ್ಮೆಯಿಂದ ಸಹಿಸಿಕೊಳ್ಳಬೇಕು. ಲೋಕಸಭೆಯಲ್ಲಿ,ವಿಧಾನಸಭೆಯಲ್ಲಿ ಚರ್ಚೆಯಾಗತ್ತೆ ಅವರು ನೋಡಿಕೊಳ್ಳುತ್ತಾರೆ ಅನ್ನೋದಲ್ಲ. ಇಲ್ಲಿ ಚರ್ಚೆ ಆಗಿದ್ದೂ ಅಲ್ಲಿಯತನಕ ತಲುಪುತ್ತೆ ಎಂಬುದನ್ನು ತಿಳಿದಿರಬೇಕು ಎಂದರು.

ಮಕ್ಕಳು ನಾಡಿನ ಭವಿಷ್ಯ ಕಟ್ಟುವವರು. ನಮ್ಮ ಗುರುಗಳು ಹೇಳುತ್ತಿದ್ದರು. ಸಮಾಜದಲ್ಲಿ ಮೂರು ವರ್ಗದ ಜನರಿದ್ದಾರೆ. ತುಂಬಿದ ಚೀಲ, ತೂತಿದ್ದ ಚೀಲ, ಖಾಲಿ ಚೀಲ, ಇದರಲ್ಲಿ ತುಂಬಿದ ಚೀಲ, 50ರ ವಯಸ್ಸನ್ನು ದಾಟಿದವರು ಅವರನ್ನು ಬದಲಾಯಿಸಲಾಗಲ್ಲ. ತೂತಿರುವ ಚೀಲ ಯುವಕ-ಯುವತಿಯರು ಅವರು ಚೀಲದಲ್ಲಿ ತುಂಬಿದಾಗ ತಕ್ಷಣ ಜಾರಿಕೊಳ್ಳುತ್ತಾರೆ. ಮೌಲ್ಯಯುತವಾಗಿ ಜಾಣ್ಮೆಯಿಂದ ತುಂಬಬೇಕು ಎಂದರು. ಇನ್ನು ಹೊಸ ಚೀಲ ಮಕ್ಕಳು. ಅವರಲ್ಲಿ ಏನು ಬೇಕಾದರೂ ತುಂಬಬಹುದು. ಏನು ತುಂಬುತ್ತಿದ್ದೇವೆಂಬ ಅರಿವು ತುಂಬುವಾತನಿಗಿರಬೇಕು ಎಂದರು. ಚೀಲದ ಮೌಲ್ಯವನ್ನು ಹೆಚ್ಚಿಸುವ ಶಿಕ್ಷಣವನ್ನು ನೀಡುತ್ತಿಲ್ಲ. ಅಕ್ಷರಜ್ಞಾನ ಅದರ ಜೊತೆ ಪದವಿ ಪಡೆದು ದೋಚುವುದು-ಬಾಚುವುದು ಅಲ್ಲ, ಶಿಕ್ಷಣದ ಮೂಲ ಉದ್ದೇಶ ದೋಚುವುದು-ಬಾಚುವುದು ಅಲ್ಲ. ಶಿಕ್ಷಣದ ಅರಿವನ್ನು ಹೆಚ್ಚಿಸಿ ಸಮಸಮಾಜವನ್ನು ನಿರ್ಮಾಣ ಮಾಡುವುದು.

ಬೇಕಾದ ಶಕ್ತಿಯನ್ನು ತನಗೆ ತಾನು ಹಾಕಿಕೊಳ್ಳುವುದು. ಸಮಾಜದಲ್ಲಿರುವ ಎಲ್ಲಾ ಕೊಳೆಯನ್ನು ತೊಳೆದು ಹಾಕುವುದು. ಈ ದೃಷ್ಟಿಯಲ್ಲಿ ನಮಗೆ ಎಂಥಹ ಶಿಕ್ಷಣ ಬೇಕು ? ಮೂರು ರೀತಿಯ ಶಿಕ್ಷಣ ಅವಶ್ಯ ವ್ಯಾವಹಾರಿಕ, ಆಧ್ಯಾತ್ಮಿಕ, ನೈತಿಕ ಎಮದು ತಿಳಿಸಿದರು.

ಈ ಸಂದರ್ಭ ಚಿಂತಕ  ಪ್ರೊ.ಮೊರಬದ ಮಲ್ಲಿಕಾರ್ಜುನ, ರಂಗಾಯಣದ ಮಾಜಿ ನಿರ್ದೇಶಕ ಹೆಚ್.ಜನಾರ್ದನ್ , ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: