ಮೈಸೂರು

12ನೇ ಶತಮಾನದ ಶರಣರ ವಚನ ಸಾಹಿತ್ಯ ಅತ್ಯಮೂಲ್ಯ : ಶಂಭುಲಿಂಗಪ್ಪ

ಮೈಸೂರು,ಆ.6 : ಅಮೆರಿಕ ಮೆರಿಲ್ಯಾಂಡ್ ನ ಗೇಥರ್ಸ್ ಬರ್ಗ್ ನಲ್ಲಿ ಜೆಎಸ್ಎ ಸ್ಪಿರಿಚ್ಯುಯಲ್ ಮಿಷನ್ ವತಿಯಿಂದ ಆ.4ರಂದು ಸತ್ಸಂಗವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಮಾಧ್ಯಮ, ವಾರ್ತೆ ಮತ್ತು ಸಂಸ್ಕೃತಿ ವಿಭಾಗದ ಪ್ರಥಮ ಕಾರ್ಯದರ್ಶಿಯಾದ ಶಂಭುಲಿಂಗಪ್ಪ ಅಕ್ಕಿಯವರು ಮಾತನಾಡಿ, ಜಗತ್ತಿನಲ್ಲಿ ಸಮಾನತೆ, ಸ್ವಾಸ್ಥ್ಯ ಜೀವನದ ಬಗ್ಗೆ ವಿಪುಲವಾದ ಸಾಹಿತ್ಯ ಬಂದಿದ್ದರೂ 12ನೇ ಶತಮಾನದಲ್ಲಿ ಶರಣರು ಕೊಟ್ಟ ವಚನ ಸಾಹಿತ್ಯ ಅತ್ಯಮೂಲ್ಯವಾದುದು ಎಂದು ತಿಳಿಸಿದರು.

ಶ್ರೀ ಸಿದ್ದೇಶ್ವರ ಸ್ವಾಮೀಜಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು, ಮೆರಿಲ್ಯಾಂಡ್, ವರ್ಜಿನಿಯ, ನ್ಯೂಜೆರ್ಸಿ, ವಾಷಿಂಗ್ಟನ್ ಮೊದಲೆಯಡೆಯ ಭಕ್ತ ಸಮೂಹವು ಭಾಗಿಯಾಗಿದ್ದರು ಎಂದು ಆಡಳಿತಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: