ಪ್ರಮುಖ ಸುದ್ದಿಮೈಸೂರು

ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಪಡಿಸಿರುವುದು ರಾಜ್ಯದ ಅಭಿವೃದ್ಧಿಗೆ ಪೂರಕ : ಸಂಸದ ವಿ.ಶ್ರೀನಿವಾಸ್ ಪ್ರಸಾದ್

ಮೈಸೂರು,ಆ.6:- ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿಲ್ಲ. ಅದಕ್ಕೆ ಪಾಕಿಸ್ತಾನ ಸ್ಪಾನ್ಸರ್ಡ್ ಟೆರರಿಸಮ್ ಕಾರಣ. ಹಾಗಾಗಿ ಬಹಳ ಯೋಚನೆ ಮಾಡಿ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದುಪಡಿಸಿದೆ. ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಪಡಿಸಿರುವುದು ರಾಜ್ಯದ ಅಭಿವೃದ್ಧಿಗೆ ಪೂರಕ ಎಂದು ಸಂಸದ ಶ್ರೀನಿವಾಸ ಪ್ರಸಾದ್ ತಿಳಿಸಿದರು.

ಅವರಿಂದು ರಾಣಿ ಬಹದ್ದೂರ್ ಸಭಾಂಗಣದಲ್ಲಿ ಅವರ ಅಭಿಮಾನಿಗಳು ಏರ್ಪಡಿಸಿದ ಮುಕ್ತಸಂವಾದಲ್ಲಿ ಪಾಲ್ಗೊಳ್ಳುವ ಮೊದಲು ಮಾಧ್ಯಮ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಒಡನಾಡಿಯವರು ಏರ್ಪಡಿಸಿದ್ದ ಜನ್ಮದಿನವನ್ನು ಮಕ್ಕಳ ಜೊತೆ ಆಚರಿಸಿದೆ. ಈಗ ಮುಕ್ತ ಸಂವಾದದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ. ಕಳೆದ 40ವರ್ಷಗಳಿಂದ   ರಾಜಕೀಯದಲ್ಲಿದ್ದೇನೆ. ಏಳು-ಬೀಳು-ಬದಲಾವಣೆ ರಾಜಕೀಯದಲ್ಲಿ ಕಂಡಿದ್ದೇನೆ. ಕೆಲವು ಸಲ ನಿಷ್ಠುರವಾಗಿದ್ದೇನೆ. ಮಾನವತಾವಾದಿಯಾಗಿರತಕ್ಕಂತವನು. ಸಾಮಾಜಿಕ ಕಳಕಳಿಗೆ ಬದ್ಧನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಚುನಾವಣೆಯಿಂದ  ನಿವೃತ್ತಿಯಾಗಬೇಕೆಂಬ ಬಯಕೆಯಿತ್ತು. ಜನರು, ಮತದಾರರು ಬಿಡಲಿಲ್ಲ. 14ನೇ ಚುನಾವಣೆ ನನ್ನ ಜೀವನದಲ್ಲಿ. ಸಂಸತ್ ಸದಸ್ಯನಾಗಿ 6ಬಾರಿ ಆಯ್ಕೆಯಾಗಿ ನನ್ನ ಜವಾಬ್ದಾರಿ ನಿರ್ವಹಿಸ್ತಿದ್ದೇನೆ. ಜನರ ಪ್ರೀತಿ, ವಿಶ್ವಾಸ, ಬೆಂಬಲ ನನ್ನ ಮೇಲೆ ನಂಬಿಕೆಯಿಟ್ಟಿದ್ದು ನನಗೆ ಬಹಳ ನೆಮ್ಮದಿ ನೀಡಿದೆ ಅವರೆಲ್ಲರೂ ಸೇರಿ ನನ್ನ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ಅವರಿಗೆಲ್ಲ ನನ್ನ ಅಭಿನಂದನೆ ಎಂದರು.

ಪಾಕಿಸ್ತಾನ ಸ್ಪಾನ್ಸರ್ಡ್ ಟೆರರಿಸಮ್ ಇಲ್ಲ -ಮುಕ್ತವಾಗಿದೆ

370ರ ರದ್ಧತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ 70ವರ್ಷಗಳಿಂದ 370 ಇತ್ತು. ಇಲ್ಲಿಯವರೆಗೂ ಕಾನೂನು ಸುವ್ಯವಸ್ಥೆಗೆ ತುಂಬ ಭಂಗ ಬರುತ್ತಿತ್ತು. ನ್ಯಾಶನಲ್ ಇಂಟಿಗ್ರಿಟಿಗೂ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಕೆಂದ್ರ ಸರ್ಕಾರ ಎಲ್ಲ ರೀತಿಯಿಂದಲೂ ಬಹಳ ಪ್ರಯತ್ನ ಮಾಡಿದರು. ಆದರೆ ಅಲ್ಲಿ ಸಾವಿರಾರು ಜನ ನಾಗರೀಕರು ಸತ್ತಿದ್ದಾರೆ. ಸೈನಿಕರು ಸತ್ತಿದ್ದಾರೆ. ಶಾಂತಿ ನೆಲೆಸಿಲ್ಲ. ಅರಾಜಕತೆಯಿದೆ. ಹಿಂದೆ ಲಕ್ಷಾಂತರ ಪ್ರವಾಸಿಗರು ಹೋಗುತ್ತಿದ್ದರು. ಈಗ ಯಾರು ಇಲ್ಲ. ಇದಕ್ಕೆ ಪಾಕಿಸ್ತಾನ ಸ್ಪಾನ್ಸರ್ಡ್ ಟೆರರಿಸಮ್ ಕಾರಣ. ಹಾಗಾಗಿ ಕೇಂದ್ರ ಸರ್ಕಾರ ಬಹಳ ಯೋಚನೆ ಮಾಡಿ ಈ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಈಗ ಕೇಂದ್ರಾಡಳಿತ ಪ್ರದೇಶವಾಗಿ  ಜಮ್ಮು-ಕಾಶ್ಮೀರ-ಲಡಾಕ್ ನ ವಿಶೇಷ ಸ್ಥಾನಮಾನದ ಹಕ್ಕನ್ನು ತೆಗೆಯಲಾಗಿದೆ ಎಂದರು.

ಮೊದಲು ಅಲ್ಲಿ ಯಾರೂ ಹೋಗಿ ನೆಲೆಸಲಿಕ್ಕಾಗುತ್ತಿರಲಿಲ್ಲ. ವ್ಯಾಪಾರ ವಹಿವಾಟು ಮಾಡಲು ಆಗುತ್ತಿರಲಿಲ್ಲ. ಈಗ ಮುಕ್ತ ಮಾಡಿದ್ದಾರೆ. ನಾಗರಿಕರಿಗೂ ಶಾಂತಿ, ನೆಮ್ಮದಿ. ರಾಜ್ಯದ ಅಭಿವೃದ್ಧಿಗೂ ಪೂರಕ. ಕೇಂದ್ರ ಸರ್ಕಾರ ಸ್ಪಂದಿಸಿ ಅಭಿವೃದ್ಧಿಗೆ ಸಹಕಾರ ಕೊಡಬೇಕು ಎಂದರು.

ಯಾವುದೇ ಅಸಮಾಧಾನ, ಭಿನ್ನಾಭಿಪ್ರಾಯವಿಲ್ಲದಂತೆ ಮಂತ್ರಿ ಮಂಡಲ ರಚನೆ

ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಪ್ರತಿಕ್ರಿಯಿಸಿದ ಅವರು ನಿಮಗೆ ಗೊತ್ತು ಯಾವ ರೀತಿ ಸರ್ಕಾರ ರಚನೆ ಮಾಡಿದ್ದಾರೆ ಅಂತ. 17ಜನ ಅತೃಪ್ತ ಶಾಸಕರು ರಾಜೀನಾಮೆ ನೀಡಿದ ನಂತರ ಸರ್ಕಾರ ರಚನೆಯಾಗಿದೆ. ಅತೃಪ್ತರು ಅನರ್ಹರಾಗಿದ್ದಾರೆ. ಅದು ಕೋರ್ಟ್ ನಲ್ಲಿದೆ. ಮುಖ್ಯಮಂತ್ರಿಯವರನ್ನು ಹೈಕಮಾಂಡ್ ಕರೆದಿದ್ದಾರೆ. ಅದಿಕ್ಕೆ ಹೋಗಿದ್ದಾರೆ. 4ವರ್ಷ ಉತ್ತಮ ಆಡಳಿತ ನೀಡುವ ದೃಷ್ಟಿಯಿಂದ ನಮ್ಮಲ್ಲಿ ಕೂಡ ಯಾವುದೇ ಅಸಮಾಧಾನ, ಭಿನ್ನಾಭಿಪ್ರಾಯವಿಲ್ಲದಂತೆ ಮಂತ್ರಿ ಮಂಡಲ ರಚನೆಯಾಗಲಿದೆ ಎಂದರು.

ಶಾಸಕ ಹರ್ಷವರ್ಧನ್ ಮಂತ್ರಿ ಹುದ್ದೆಯ ಆಕಾಂಕ್ಷಿಯೇ ಎಂದಾಗ ಅವರು ಮೊದಲ ಬಾರಿ ಆಯ್ಕೆಯಾಗಿದ್ದಾರೆ. ಅವರ ಕ್ಷೇತ್ರದ ಅಭಿವೃದ್ಧಿ, ಶಾಂತಿ ಕಾಪಾಡಿಕೊಂಡು ಬರಬೇಕು. ಅವರು ಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: