ಕ್ರೀಡೆಮೈಸೂರು

ಆಟೋಟ ಸ್ಪರ್ಧೆಯಲ್ಲಿ ಗಂಗೋತ್ರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಮೈಸೂರು, ಆ.6:- ಬೋಗಾದಿ ಮುಖ್ಯ ರಸ್ತೆ, ಚರ್ಚ್ ಅಡ್ಡ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯ ಮಕ್ಕಳು 2019-20 ಸಾಲಿನಲ್ಲಿ  ನಡೆದಂತಹ ಫ್ರೌಡಶಾಲಾ ವಿಭಾಗದ ಕರಾಟೆಯಲ್ಲಿ  ಜಿಲ್ಲಾ ಮಟ್ಟದ ಪಂದ್ಯದಲ್ಲಿ ವಿಜಯಶಾಲಿಯಾಗಿ ಮುಂದಿನ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಬಾಲಕಿಯರ ವಿಭಾಗದ ದರ್ಶಿನಿ ಸಿ.ಎಸ್. ಮತ್ತು ಪ್ರಿಯ ಬಿ.ಎಸ್. ಆಯ್ಕೆಯಾಗಿರುತ್ತಾರೆ ಹಾಗೂ ಬಾಲಕರ ವಿಭಾಗದಲ್ಲಿ ಮಣಿಕಂಠ ವಿ. ಇವರು ಗಂಗೋತ್ರಿ  ಪಬ್ಲಿಕ್ ಶಾಲೆಯಿಂದ ಆಯ್ಕೆಯಾಗಿರುತ್ತಾರೆ.

ಅಥ್ಲೆಟಿಕ್ಸ್ 2019-20 ಸಾಲಿನಲ್ಲಿ ನಡೆದ ದಕ್ಷಿಣ ವಲಯದ ಪ್ರೌಢಶಾಲೆಯ ಸ್ಪರ್ಧೆಯಲ್ಲಿ ದರ್ಶಿನಿ ಉದ್ದ ಜಿಗಿತ ಪ್ರಥಮ, ಎತ್ತರ ಜಿಗಿತ ದ್ವಿತೀಯ, ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕಿಯರ ವೈಯುಕ್ತಿಕ ವಿಭಾಗದಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸನ್ಮಿತ ಎಂ.ಎಸ್. 400 ಮೀ ಮತ್ತು 800 ಮೀ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸಂಜನಾ ಕುಮಾರಿ ಎಲ್. ಟ್ರಿಪಲ್ ಜಂಪ್‍ನಲ್ಲಿ ದ್ವಿತೀಯ ಸ್ಥಾನ ಪಡೆದು ಮುಂದಿನ ಹಂತದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಹಾಗೂ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಗಂಗೋತ್ರಿ ಪಬ್ಲಿಕ್ ಶಾಲೆಯು ತಮ್ಮದಾಗಿಸಿಕೊಂಡಿದೆ.

2019-20ನೇ ಸಾಲಿನಲ್ಲಿ ನಡೆದ ಪ್ರಾಥಮಿಕ ಶಾಲೆಯ ದಕ್ಷಿಣ ವಲಯದ ಅಥ್ಲೆಟಿಕ್ಸ್ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಹೇಮಂತ್ ಎನ್.ಎಮ್. 400 ಮೀಟರ್‍ನಲ್ಲಿ ಪ್ರಥಮ, ಸ್ಪರ್ಧೆಯಲ್ಲಿ ಸಂದೀಪ್ ಕುಮಾರ್ ಎಸ್. ಉದ್ದಜಿಗಿತದಲ್ಲಿ  ದ್ವಿತೀಯ ಹಾಗೂ ತನುಶ್ರೀ ಬಾಲಕಿಯರ ವಿಭಾಗದ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: